ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾ-ಮುಲಾಯಂ ಭೇಟಿಗೆ ವಿಶೇಷ ಅರ್ಥವಿಲ್ಲ: ಅಮರ್‌ಸಿಂಗ್  Search similar articles
ಕಳೆದ ವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ನಿವಾಸದಲ್ಲಿನ ಬಿಎಸ್ಪಿ ವರಿಷ್ಠೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್ ಅವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದಿರುವ ಸಮಾಜವಾದಿ ಪಕ್ಷದ ನಾಯಕ ಅಮರ್‌ಸಿಂಗ್, ಉಭಯ ಪಕ್ಷಗಳು ಹೊಂದಾಣಿಕೆಯಾಗಲಿದೆ ಎನ್ನುವ ಉಹಾಪೊಹಗಳನ್ನು ತಳ್ಳಿಹಾಕಿದ್ದಾರೆ.

ಮಾನವ ಹಕ್ಕುಗಳ ಆಯೋಗ ಸದಸ್ಯರ ಆಯ್ಕೆ ಪ್ರಕ್ರಿಯೆಗಾಗಿ ಕರೆದಿದ್ದ ಸಭೆಯಲ್ಲಿ ವಿಪಕ್ಷ ನಾಯಕನ ನೆಲೆಯಲ್ಲಿ ಹಾಜರಿದ್ದ ಮುಲಾಯಂ, ಮಾಧ್ಯಮದವರು ಮತ್ತು ಇತರ ರಾಜಕೀಯ ನಾಯಕರ ಹುಬ್ಬೇರುವಂತೆ ಮಾಡಿದ್ದರು. ಉಭಯ ನಾಯಕರು 13 ವರ್ಷಗಳ ಬಳಿಕ ವೇದಿಕೆ ಹಂಚಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು.

ಬಿಎಸ್‌ಪಿ ಅಧಿಕಾರಕ್ಕೆ ಬಂದು ಸುಮಾರು ಒಂದು ವರ್ಷಗಳ ನಂತರ ಮುಖ್ಯಮಂತ್ರಿ ಮಾಯಾವತಿ ಹಾಗೂ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಭೇಟಿಯನ್ನು ರಾಜಕೀಯ ಉದ್ದೇಶ ಎಂದು ಪರಿಗಣಿಸಬೇಕಾಗಿಲ್ಲ. ಉಭಯ ಪಕ್ಷಗಳ ನಡುವೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ರಾಷ್ಟ್ರಪತಿಯವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ಮಾನವ ಹಕ್ಕುಗಳ ಆಯೋಗದ ಸದಸ್ಯರ ನೇಮಕಾತಿ ಕುರಿತಂತೆ ಚರ್ಚೆಗಾಗಿ ಮಾಯಾವತಿ ನಿವಾಸಕ್ಕೆ ತೆರಳಿದ್ದಾರೆ. ವಿರೋಧ ಪಕ್ಷದ ನಾಯಕನನ್ನು ಇಂತಹ ಸಂದರ್ಭದಲ್ಲಿ ಸಹಜವಾಗಿ ಅಹ್ವಾನಿಸಲಾಗುತ್ತದೆ, ಇದರಲ್ಲಿ ಹೊಸತೇನಿಲ್ಲ ಎಂದು ಸ್ಪಷ್ಟಪಡಿಸಿದರು.
ಮತ್ತಷ್ಟು
ಬಿಜೆಪಿಯೂ ಬೇಡ, ಕಾಂಗ್ರೆಸ್ಸೂ ಬೇಡ: ಮಮತಾ
ಗುಜ್ಜಾರರಿಂದ ರೈಲ್ವೇಗೆ 40ಕೋಟಿ ನಷ್ಟ
ವಿನಾಶದಂಚಿನಲ್ಲಿ ಹುಲಿಗಳ ಸಂತತಿ: ವಿ.ಬ್ಯಾಂಕು
ಆರುಷಿ ಹತ್ಯೆ ಪೂರ್ವನಿಯೋಜಿತ: ಸಿಬಿಐ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ
ಮಾತುಕತೆಗೆ ಮತ್ತೆ ವಿಘ್ನ; ಭೈಂಸ್ಲಾ ವಿರುದ್ಧ ಕೇಸ್