ನವದೆಹಲಿ: ಕೇಂದ್ರ ಸರಕಾರ ಗುರುವಾರ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲೊಂದರ ರೂ.105ರಿಂದ 850ಕ್ಕೇರಿಸಿದೆ. ಕೃಷಿ ವೆಚ್ಚಗಳು ಮತ್ತು ಬೆಲೆಗಾಗಿ ಆಯೋಗವು ಬೆಂಬಲ ಬೆಲೆಯನ್ನು ಒಂದು ಸಾವಿರ ರೂಪಾಯಿಗೇರಿಸಬೇಕೆಂದು ಶಿಫಾರಸ್ಸು ಮಾಡಿದ್ದು, ಈ ವಿಚಾರವನ್ನು ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಗೆ ಕಳುಹಿಸುವ ಮುನ್ನ ಈ ಮಧ್ಯಂತರ ಕ್ರಮ ಕೈಗೊಳ್ಳಲಾಗಿದೆ.
ಎಲ್ಲಾ ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಯ ಸಲಹಾ ಮಂಡಳಿಯಾಗಿರುವ ಆಯೋಗವು ಸಾಮಾನ್ಯ ವಿವಿಧ ತಳಿಯ ಭತ್ತದ ಬೆಲೆಯನ್ನು 255 ರೂಪಾಯಿಗಳಿಗಿಂತ 745 ರೂಪಾಯಿಗಳಿಗೇರಿಸಿದೆ.
2007-08ರ ಸಾಲಿಗೆ ಭತ್ತದ ಕನಿಷ್ಠ ಬೆಂಬಲ ಬೆಲೆಯು ಸಾಮಾನ್ಯ ತಳಿಗೆ 675 ರೂಪಾಯಿ ಆಗಿದ್ದಲ್ಲಿ, ಉತ್ತಮ ಗುಣಮಟ್ಟದ ಭತ್ತ ಕ್ವಿಂಟಲೊಂದರ ರೂ.675 ನಿಗದಿ ಮಾಡಿತ್ತು. ಕನಿಷ್ಟ ಬೆಂಬಲ ದರದ ಮೇಲೆ ಮತ್ತೆ 100 ರೂಪಾಯಿಗಳ ಬೋನಸನ್ನೂ ಕೇಂದ್ರ ಪ್ರಸ್ತಾಪಿಸಿದೆ.
ಗುಜರಾತ್, ಮಧ್ಯಪ್ರದೇಶ ಮತ್ತು ಒರಿಸ್ಸಾದಂತಹ ರಾಜ್ಯಗಳು ಸಾವಿರ ರೂಪಾಯಿಗಿಂತ ಕಡಿಮೆ ಬೆಂಬಲ ಬೆಲೆ ಇಚ್ಛಿಸಿದ್ದರೆ, ಇತರ ರಾಜ್ಯಗಳು ಇದಕ್ಕಿಂತ ಹೆಚ್ಚು ಬೆಲೆ ಬಯಸಿದ್ದವು. ವಿವಿಧ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ವಿಚಾರವನ್ನು ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಹಣಕಾಸು ಸಚಿವ ಚಿದಂಬರಂ ಹೇಳಿದ್ದಾರೆ. ಅವರು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಇತರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಇರುವ ಕಾರಣ ಅವುಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
|