ನವದೆಹಲಿ : ಕಳೆದೊಂದು ವರ್ಷದ ಅವಧಿಯಲ್ಲಿ ಕೇಂದ್ರ ಸರಕಾರ ರಾಜ್ಯದ ಅಭಿವೃದ್ದಿಗೆ ಆರ್ಥಿಕ ನೆರವು ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ನಾವು ಕೂಡ ರಾಜ್ಯದ ತೆರಿಗೆಯನ್ನು ಕಟ್ಟುವುದಿಲ್ಲ, ಬೇಕಿದ್ದರೆ, ರಾಜ್ಯಕ್ಕೆ ನೀಡಬೇಕಿರುವ ಆರ್ಥಿಕ ನೆರವು ನಿಲ್ಲಿಸಿ ಎಂದು ಸವಾಲೆಸೆದಿದ್ದಾರೆ.
"ಗುಜರಾತ್ ರಾಜ್ಯವು ವರ್ಷವೊಂದರ 40ಸಾವಿರ ಕೋಟಿ ರೂ.ಕೇಂದ್ರಕ್ಕೆ ತೆರಿಗೆ ಕಟ್ಟುತ್ತಿದ್ದರೂ ಕೂಡ, ನೀವು ಎಷ್ಟು ಹಣವನ್ನು ವಾಪಸು ಕೊಟ್ಟಿದ್ದೀರಿ" ಎಂದು ಮೋದಿ ಖಾರವಾಗಿ ಪ್ರಶ್ನಿಸಿದ್ದಾರೆ.
ಗುಜರಾತ್ ಭಾರಿ ಮೊತ್ತದ ತೆರಿಗೆಯನ್ನು ಕಟ್ಟುತ್ತಿದ್ದರೂ ಕೂಡ ಕೇಂದ್ರ ರಾಜ್ಯದ ಅಭಿವೃದ್ದಿಯಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. ಆದರೆ ಮೋದಿಯ ಈ ಹೇಳಿಕೆಯನ್ನು ಕಾಂಗ್ರೆಸ್ ತಳ್ಳಿಹಾಕಿದ್ದು, ಮೋದಿ ಹೇಳಿಕೆ ರಾಷ್ಟ್ರವಿರೋಧಿಯಾದುದು ಎಂದಿದೆ.
|