ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಕ್ಕೆ 1.44 ಲ. ಟನ್ ರಸಗೊಬ್ಬರ: ಕೇಂದ್ರ  Search similar articles
ಮುಖ್ಯಮಂತ್ರಿಗೆ ಪ್ರಧಾನಿ ಭರವಸೆ
ಕೇಂದ್ರವು ರಾಜ್ಯಕ್ಕೆ ಈ ತಿಂಗಳಲ್ಲಿ ರಾಜ್ಯದ ಅಂದಾಜು ಅಗತ್ಯಕ್ಕಿಂತಲೂ 20 ಸಾವಿರ ಟನ್ ಹೆಚ್ಚು ಅಂದರೆ, 1.4 ಲಕ್ಷ ಟನ್ ಡೈ-ಅಮೋನಿಯಂ ಪಾಸ್ಫೇಟ್ (ಡಿಎಪಿ) ರಸಗೊಬ್ಬರ ಬಿಡುಗಡೆ ಮಾಡುವುದಕ್ಕೆ ಸಮ್ಮತಿ ನೀಡಿದೆ.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ರಾತ್ರಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಸಗೊಬ್ಬರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಈ ಘೋಷಣೆ ಹೊರಬಿದ್ದಿದೆ.

ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಅಭಾವದಿಂದಾಗಿ ರಾಜ್ಯದ ವಿವಿಧೆಡೆ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು, ಹಾವೇರಿಯಲ್ಲಿ ಮಂಗಳವಾರ ಗೋಲೀಬಾರ್‌ಗೆ ಒಬ್ಬ ರೈತ ಬಲಿಯಾಗಿದ್ದ. ಅಲ್ಲದೆ, ರಾಜ್ಯದ ಬಿಜೆಪಿ ಸರಕಾರದ ಮೇಲೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತೀವ್ರ ಆರೋಪ ಮಾಡಿದ್ದವು.

ತಮ್ಮ ಅಹವಾಲನ್ನು ತಾಳ್ಮೆಯಿಂದ ಆಲಿಸಿದ ಪ್ರಧಾನಿ ಸಿಂಗ್, ರಾಜ್ಯದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದರು. ಮತ್ತು ರಾಜ್ಯದಲ್ಲಿ ತಲೆದೋರಿರುವ ರಸಗೊಬ್ಬರ ಕೊರತೆ ನೀಗಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ಯಡಿಯೂರಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್ 20ರೊಳಗೆ 1.20 ಲಕ್ಷ ಟನ್ ಡಿಎಪಿ ವಿತರಿಸುವುದಾಗಿ ಪಾಸ್ವಾನ್ ಭರವಸೆ ನೀಡಿದ್ದಾರೆ. ಉಳಿದ 20 ಸಾವಿರ ಟನ್ ಡಿಎಪಿಯನ್ನು ಜೂ.30ರೊಳಗೆ ನೀಡಲಾಗುತ್ತದೆ.

ಅಂತೆಯೇ, 1.1 ಲಕ್ಷ ಕಾಂಪ್ಲೆಕ್ಸ್ ರಸಗೊಬ್ಬರವನ್ನೂ ಜೂನ್.20ರೊಳಗೆ ಒದಗಿಸುಲವುದಾಗಿ ಕೇಂದ್ರ ಭರವಸೆ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮತ್ತಷ್ಟು
ಅರುಷಿ ಹತ್ಯೆ: ಕೃಷ್ಣನಿಗೆ 354 ಪ್ರಶ್ನೆಗಳು
ಜಸ್ಸಾಲ್ ಟರ್ಕಿ, ಚಿತ್ರಾ ಸ್ವಿಜರ್‌ಲ್ಯಾಂಡ್ ರಾಯಭಾರಿ
ಕೇಂದ್ರದ ಮಲತಾಯಿ ಧೋರಣೆ: ಮೋದಿ
ಭತ್ತ ಕನಿಷ್ಠ ಬೆಂಬಲ ಬೆಲೆ ರೂ.850ಕ್ಕೇರಿಕೆ
ಮಗು ಬದಲಿಸಿದಾಕೆಯೀಗ ಪೊಲೀಸರ ಅತಿಥಿ
ಅಫ್ಜಲ್ ಪ್ರಕರಣ ಕಾನೂನೇ ನಿರ್ಧರಿಸಬೇಕು: ಕಾಂಗ್ರೆಸ್