ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಶಾಸಕ' ಪಾನ್ ಮಸಾಲ: ಶಾಸಕರ ಕೆಂಗಣ್ಣು  Search similar articles
ಹೆಸರಲ್ಲೇನಿದೆ ಎಂದು ಕೇಳೋದು ಸಾಮಾನ್ಯ. ಹೆಸರೇ ಎಲ್ಲ ವಿವಾದಗಳಿಗೆ ಕಾರಣವಾಗುವುದೂ ಇದೆ. ಇಲ್ಲಿ ಆಗಿರುವುದೂ ಅದೇ. 'ವಿಧಾಯಕ' (ಅಂದರೆ ಶಾಸಕ ಎಂಬರ್ಥ) ಹೆಸರಿನ ಪಾನ್ ಮಸಾಲವೊಂದು ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ.

ಇದೀಗ ಈ 'ಅವಮಾನಕರ' ಉತ್ಪನ್ನದ ಮಾರಾಟಕ್ಕೆ ಅನುಮತಿ ನೀಡಿರುವ ಅಧಿಕಾರಿ ಮತ್ತು ಉತ್ಪನ್ನದ ತಯಾರಕರ ವಿರುದ್ಧ ವಿಧಾಯಕರೊಬ್ಬರು ವಿಧಾನಸಭೆಯಲ್ಲಿ ನಿಂದನಾ ಸೂಚನೆ ಮಂಡಿಸಿದ್ದಾರೆ.

ಇದೀಗ ಈ ಪಾನ್ ಮಸಾಲವನ್ನು ಯಾರು ಮಾರುಕಟ್ಟೆಗಿಳಿಸಿದ್ದಾರೆ ಮತ್ತು ಇದರ ನೋಂದಣಿ, ಪರವಾನಗಿ ಮತ್ತು ಮಾರಾಟ ಅನುಮತಿ ನೀಡಿದವರಾರು ಎಂಬುದರ ಬಗ್ಗೆ ಉತ್ತರ ಪ್ರದೇಶ ವಿಧಾನಸಭೆಯ ಅಧಿಕಾರಿಗಳಿಂದ ತನಿಖೆ ಆರಂಭವಾಗಿದೆ.

ಶಾಸಕ ಈಶ್ವರಚಂದ್ರ ಶುಕ್ಲ ಪ್ರಕಾರ, 'ವಿಧಾಯಕ ಮಸಾಲ'ವು ಶಾಸಕರನ್ನು 'ಅವಮಾನಿಸುತ್ತಿದೆ'. ಇದನ್ನು ಮಾರುವವರು ಮತ್ತು ಉತ್ಪಾದಿಸುವವರನ್ನು ಶಿಕ್ಷಿಸಬೇಕು ಎನ್ನುತ್ತಾರವರು.

ಅದನ್ನು ತಯಾರಿಸುವ ಸಂಸ್ಥೆಯ ಮ್ಯಾನೇಜರ್ ವಿರುದ್ಧ ಅವರು ಹಕ್ಕುಚ್ಯುತಿ ಮತ್ತು ಸದನ ನಿಂದನಾ ನೋಟೀಸನ್ನು ಮಂಡಿಸಿದ್ದಾರೆ. ಆದರೆ ಕಳೆದ ಜನವರಿ 21ರಂದೇ ಇದನ್ನು ಸದನದ ಅಧಿವೇಶನ ಸಂದರ್ಭ ಮಂಡಿಸಲಾಗಿದ್ದು, ಅಂದಿನಿಂದ ಇದುವರೆಗೂ ಅಧಿಕಾರಿಗಳಿಗೆ ಇದರ ಮಾರಾಟಕ್ಕೆ ಯಾರು ಜವಾಬ್ದಾರರು ಎಂಬುದನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ ಎಂಬುದೇ ವಿಶೇಷ.

ಕಳೆದ ನಾಲ್ಕು ತಿಂಗಳಲ್ಲಿ ವಿಧಾನಸಭಾ ಕಾರ್ಯಾಲಯವು ಸಣ್ಣ ಕೈಗಾರಿಗೆ, ತೆರಿಗೆ ಮತ್ತು ನೋಂದಣಿ, ಗೃಹ ಮತ್ತು ವಹಿವಾಟು ತೆರಿಗೆ ಇಲಾಖೆಗಳಿಗೆ ಪತ್ರ ಬರೆದಿದೆ. ಆದರೆ ಅವರೆಲ್ಲರೂ ರಾಜ್ಯ ರಾಜಧಾನಿಯಲ್ಲಿ ಚಲಾವಣೆಯಲ್ಲಿರುವ ವಿಧಾಯಕ ಪಾನ್ ಮಸಾಲದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿಧಾನಸಭೆಯ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಪಾಂಡೆ ತಿಳಿಸಿದ್ದಾರೆ.

ವಿಷಯದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ವಿಧಾನಸಭಾ ಸ್ಪೀಕರ್ ಸುಖದೇವ್ ರಾಜಬೀರ್ ಅವರೆದುರು ಇದನ್ನು ಮಂಡಿಸುವ ಮುನ್ನ, ಈ ಉತ್ಪನ್ನದ ತಯಾರಿಕಾ ಘಟಕ ಮತ್ತು ಅನುಮತಿ ನೀಡಿರುವುದರಲ್ಲಿ ಒಳಗೊಂಡಿರುವ ಅಧಿಕಾರಿಗಳ ಕುರಿತು ಮಾಹಿತಿ ಅತ್ಯಗತ್ಯವಾಗುತ್ತದೆ.
ಮತ್ತಷ್ಟು
ಪ.ಬಂ.: ಸರ್ವಪಕ್ಷ ಸಭೆಗೆ ಕರೆ
ರಾಜ್ಯಕ್ಕೆ 1.44 ಲ. ಟನ್ ರಸಗೊಬ್ಬರ: ಕೇಂದ್ರ
ಅರುಷಿ ಹತ್ಯೆ: ಕೃಷ್ಣನಿಗೆ 354 ಪ್ರಶ್ನೆಗಳು
ಜಸ್ಸಾಲ್ ಟರ್ಕಿ, ಚಿತ್ರಾ ಸ್ವಿಜರ್‌ಲ್ಯಾಂಡ್ ರಾಯಭಾರಿ
ಕೇಂದ್ರದ ಮಲತಾಯಿ ಧೋರಣೆ: ಮೋದಿ
ಭತ್ತ ಕನಿಷ್ಠ ಬೆಂಬಲ ಬೆಲೆ ರೂ.850ಕ್ಕೇರಿಕೆ