ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಷಿ ಪ್ರಕರಣ: ಕಂಪೌಂಡರ್ ಕೃಷ್ಣ ಬಂಧನ  Search similar articles
ನವದೆಹಲಿ: ಅರುಷಿ ಹತ್ಯೆ ಪ್ರಕರಣದ ಪ್ರಧಾನ ಆರೋಪಿಯಾಗಿರುವ ರಾಜೇಶ್ ತಲ್ವಾರ್ ಅವರ ಸಹಾಯಕ ಕಾಂಪೌಂಡರ್ ಕೃಷ್ಣನನ್ನು ಸಿಬಿಐ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸುಳ್ಳುಪತ್ತೆ ಪರೀಕ್ಷೆ ಮತ್ತು ನಾರ್ಕೋ ಅನಾಲಿಸ್ ಪರೀಕ್ಷೆಗಳ ಬಳಿಕ ಕೃಷ್ಣನನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿ ದೆಹಲಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೃಷ್ಣನನ್ನು ಪಾಲಿಗ್ರಾಫ್ ಮತ್ತು ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿಗೆ ತೆರಳುವ ಮುನ್ನ ಇತರ ಎರಡು ಪರೀಕ್ಷೆಗಳನ್ನು ಮಾಡಲಾಗಿತ್ತು. ಜೂನ್ 9ರಂದು ಎಐಐಎಂಎಸ್‌ನಲ್ಲಿ ಮಾನಸಿಕ ಪರೀಕ್ಷೆ ನಡೆಸಲಾಗಿತ್ತು. ಇದರ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.

ಪರೀಕ್ಷೆಗಳ ವಿವರಣೆಯನ್ನು ನೀಡಲು ಕುಮಾರ್ ನಿರಾಕರಿಸಿದ್ದಾರೆ. "ತನಿಖೆ ಮುಂದುವರಿದಿದೆ" ಎಂದಷ್ಟೆ ನುಡಿದರು. ಯಾವ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂಬುದು ಗೊತ್ತಾಗಿಲ್ಲ.

ರಾಜೇಶ್ ದಂಪತಿಗಳ ಆಸ್ಪತ್ರೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ದಂಪತಿ ಪ್ರಫುಲ್ ಮತ್ತು ಅನಿತಾ ದುರ್ರಾನಿ ಅವರ ಮನೆಗೆಲಸದಾಳು ರಾಜ್ಕುಮಾರ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಕೃಷ್ಣ, ರಾಜ್ಕುಮಾರ್ ಮತ್ತು ಹೇಮರಾಜ್ ಮೂವರೂ ನೇಪಾಳದವರು. ಮೇ 15ರಂದು ಈ ಇಬ್ಬರು ಹೇಮರಾಜ್ ಕೊಠಡಿಯಲ್ಲಿ ಕುಳಿತು ಮದ್ಯಪಾನ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಹದಿನಾಲ್ಕರ ಹರೆಯದ ಅರುಷಿಯ ಮೃತದೇಹ ನೋಯ್ಡಾದ ಮನೆಯಲ್ಲಿ ಮೇ 16ರಂದು ಪತ್ತೆಯಾಗಿತ್ತು. ಮೊದಲಿಗೆ ಮನೆಗೆಲಸದಾಳು ಹೇಮರಾಜ್‌ನ ಮೇಲೆ ಸಂಶಯ ಪಡಲಾಗಿತ್ತು. ಆದರೆ ಆತನ ಮೃತದೇಹವೂ ಮರುದಿನ ಮನೆಯ ಟೆರೇಸ್‌ನಲ್ಲಿ ಕಂಡುಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಳಿಕ ಪೊಲೀಸರು ಅರುಷಿಯ ತಂದೆ ರಾಜೇಶ್ ತಲ್ವಾರ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಿದ್ದಾರೆ.
ಮತ್ತಷ್ಟು
ನಾವು ಯಾರ್ಗೂ ಕಮ್ಮಿ ಇಲ್ಲಾ....
ಶಿವಸೇನಾ ಮುಖವಾಣಿ ಸಾಮ್ನಾ ಕಚೇರಿ ಮೇಲೆ ದಾಳಿ
'ಶಾಸಕ' ಪಾನ್ ಮಸಾಲ: ಶಾಸಕರ ಕೆಂಗಣ್ಣು
ಪ.ಬಂ.: ಸರ್ವಪಕ್ಷ ಸಭೆಗೆ ಕರೆ
ರಾಜ್ಯಕ್ಕೆ 1.44 ಲ. ಟನ್ ರಸಗೊಬ್ಬರ: ಕೇಂದ್ರ
ಅರುಷಿ ಹತ್ಯೆ: ಕೃಷ್ಣನಿಗೆ 354 ಪ್ರಶ್ನೆಗಳು