ಸಿಲಿಗುರಿ: ಪ್ರತ್ಯೇಕ ರಾಜ್ಯ ಬೇಡಿಕೆ ಇಟ್ಟಿರುವ ಗೂರ್ಖಾಲ್ಯಾಂಡ್ ಸಂಘಟನೆಯ ನಾಯಕರನ್ನು ಮಾತುಕತೆಯ ಮೇಜಿಗೆ ಬರುವಂತೆ ಮನವೊಲಿಸುವಲ್ಲಿ ಪಶ್ಚಿಮ ಬಂಗಾಳದ ಎಡಪಕ್ಷ ನೇತೃತ್ವದ ಸರಕಾರ ವಿಫಲವಾಗಿದೆ.
ಕೇಂದ್ರ ಸರಕಾರದ ಭಾಗಿದಾರಿಕೆ ಇಲ್ಲದೆ ತಾವು ಮಾತುಕತೆಗೆ ಬರುವುದಿಲ್ಲ ಎಂದು ಗೂರ್ಖಾ ಜನಮುಕ್ತಿ ಮೋರ್ಚದ ನಾಯಕ ಬಿಮಲ್ ಗುರುಂಗ್ ಪುನರುಚ್ಚರಿಸಿದ್ದಾರೆ. ಅಲ್ಲದೆ, ಜೂನ್ 17 ರಿಂದ ಪ್ರತಿಭಟನೆ ಪುನಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಶನಿವಾರದ ಆದಿಯಲ್ಲಿ ನಡೆದ ಸಭೆಯಲ್ಲಿ, ದಾರ್ಜಿಲಿಂಗ್ ಬಿಕ್ಕಟ್ಟು ವಿಷಯವಾಗಿನ ತಮ್ಮ ಎಲ್ಲಾ ವೈಮನಸ್ಸನ್ನು ನುಂಗಿಕೊಂಡ ಎಡಪಕ್ಷಗಳು, ಜೂನ್ 18ರಂದು ಮಾಕುಕತೆಗೆ ಬರುವಂತೆ ಗೂರ್ಖಾ ಜನಮುಕ್ತಿ ಮೋರ್ಚ ನಾಯಕ ಬಿಮಲ್ ಗುರುಂಗ್‌ರ ಮನವೊಲಿಸುವಂತೆ ಮುಖ್ಯಮಂತ್ರಿ ಬುದ್ದದೇವ್ ಬಟ್ಟಚಾರ್ಯರಿಗೆ ಕರೆ ನೀಡಿದ್ದವು.
ಗೂರ್ಖಾ ಜನಮುಕ್ತಿ ಮೋರ್ಚವು, ಬುದ್ದದೇವ್ ಬಟ್ಟಾಚಾರ್ಯರ ಮಾತುಕತೆ ಆಹ್ವಾನವನ್ನು ತಿರಸ್ಕರಿಸಿದೆ. ಗೂರ್ಖಾಲ್ಯಾಂಡ್ ಒಂದು ರಾಜಕೀಯ ವಿಷಯವಾಗಿದ್ದು,ಇದನ್ನು ರಾಜಕೀಯವಾಗಿ ಪರಿಹರಿಸುವ ಅಗತ್ಯವಿದೆ ಎಂದು ಅದು ಪ್ರತಿಕ್ರಿಯಿಸಿದೆ.
|