ಅರುಶಿ ಹತ್ಯಾ ಪ್ರಕರಣದಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಡಾ|ರಾಜೇಶ್ ತಲ್ವಾರ್ ಅವರ ಕಂಪೌಂಡರ್ ಆಗಿದ್ದ ಕೃಷ್ಣನನ್ನು ಗಾಜಿಯಾಬಾದ್‌ನ ಸಿಬಿಐ ಕೋರ್ಟ್‌ಗೆ ಶನಿವಾರ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು ಮೂರು ದಿನಗಳ ಕಾಲ ಸಿಬಿಐ ವಶಕ್ಕೊಪಿಸಿದೆ. ಕಂಪೌಂಡರ್ ಕೃಷ್ಣನನ್ನು ಶುಕ್ರವಾರ ಸಂಜೆ ಬಂಧನಕ್ಕೀಡಾಗಿದ್ದ. ಶನಿವಾರ ಬೆಳಿಗ್ಗೆ ಸಿಬಿಐ ಗಾಜಿಯಾಬಾದ್‌ನ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಅರುಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳಿಗಾಗಿ ಸಿಬಿಐ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಲ್ಲದೇ ಕೊಲೆಗೆ ಬಳಸಿದ ಆಯುಧದ ಬಗ್ಗೆ ಅನಾಮಧೇಯ ಮಾಹಿತಿಯೊಂದು ಲಭಿಸಿರುವುದಾಗಿ ಸಿಬಿಐ ಮೂಲ ಹೇಳಿದೆ. ಬೆಂಗಳೂರಿನಲ್ಲಿ ಕಂಪೌಂಡರ್ ಕೃಷ್ಣನನ್ನು ಶುಕ್ರವಾರದಂದು ಫಾಲಿಗ್ರಾಫ್ ಮತ್ತು ನಾರ್ಕೋ ಅನಾಲಿಸ್ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಪರೀಕ್ಷೆ ವೇಲೆ ಲಭಿಸಿರುವ ಮಾಹಿತಿಯನ್ವಯ ಕೃಷ್ಣನನ್ನು ಶುಕ್ರವಾರ ಸಂಜೆ ಬಂಧಿಸಲಾಗಿತ್ತು.
|