ಲೋಕಸಭೆ ಮತ್ತು ರಾಜ್ಯ ಅಸೆಂಬ್ಲಿ ಚುನಾವಣೆಗಳನ್ನು ಎದುರಿಸಲು ಸಿದ್ಧವಾಗುತ್ತಿರುವುದರೊಂದಿಗೆ, ಚುನಾವಣಾ ಪ್ರಚಾರ ಪ್ರಕ್ರಿಯೆಯ ಸಂದರ್ಭದಲ್ಲಿ ಯುಪಿಎ ಸರಕಾರಕ್ಕೆ ಅವಮಾನ ಮಾಡಲು, ಯುಪಿಎ ಸರಕಾರದ ವಿವಿಧ ಅಧಿಕಾರಿಗಳು ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಪ್ರಚಾರದ ವೇಳೆ ಬಳಸಿಕೊಳ್ಳಲಾಗುವುದು ಎಂದು ಬಿಜೆಪಿ ಚುನಾವಣಾ ನಿರ್ವಾಹಕರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಅಲ್ಪಸಂಖ್ಯಾತರಿಂಗ 'ದೇಶದ ಸಂಪನ್ಮೂಲದಲ್ಲಿ ಮೊದಲ ಹಕ್ಕು' ಎಂಬ ಹೇಳಿಕೆಯು ಸೇರಿದಂತೆ ವಿವಿಧ ಹೇಳಿಕೆಗಳತ್ತ ಬಿಜೆಪಿ ಗಮನಹರಿಸಲಿದೆ.
ಯುಪಿಎ ಸರಕಾರವು ನೀಡಿದ ವಿವಿಧ ವಿವಾದಾತ್ಮಕ ಹೇಳಿಕೆಗಳನ್ನು ಪಕ್ಷದ ಪ್ರಚಾರದ ವೇಳೆ ಬಳಸಿಕೊಳ್ಳಲಿದ್ದೇವೆ. ಇದು ಖಚಿತವಾಗಿಯೂ ಕಾಂಗ್ರೆಸ್ ಕಾರ್ಯಗಳನ್ನು ಕೆಡಿಸಿ ಹಾಕುವುದರೊಂದಿಗೆ ಯುಪಿಎ ಸರಕಾರಕ್ಕೆ ಅವಮಾನ ಉಂಟಾಗುವಂತೆ ಮಾಡುತ್ತದೆ ಎಂದು ಬಿಜೆಪಿ ಪಕ್ಷದ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಪಕ್ಷದ ಈ ಹೇಳಿಕೆಯನ್ನು ಬಳಸಿಕೊಂಡು ಆಡಳಿತಾರೂಡ ಮೈತ್ರಿಕೂಟದ ಕಾರ್ಯವೈಖರಿಗಳನ್ನು ಪ್ರಚಾರದ ವೇಳೆ ಬಳಸಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
|