ರಾಜಧಾನಿ ದೆಹಲಿಗೆ ಮುಂಗಾರು ಮಳೆಯು 14 ದಿನ ಮುಂಚಿತವಾಗಿಯೇ ಪ್ರವೇಶಿಸಿದ್ದು, ಪ್ರತಿ ವರ್ಷ ಜೂನ್ 29ರ ಆಸುಪಾಸಿನಲ್ಲಿ ಮಾನ್ಸೂನ್ ಪ್ರವೇಶಿಸುವ ದೆಹಲಿಯಲ್ಲಿ ಈ ಭಾರಿ 108 ವರ್ಷಗಳ ಬಳಿಕ 14 ದಿನಗಳ ಮುಂಚಿತವಾಗಿಯೇ ಮಾನ್ಸೂನ್ ಆಗಮಿಸಿದೆ.
ಹವಾಮಾನ ದಾಖಲೆಗಳ ಪ್ರಕಾರ,ಕೇವಲ 1901ರಲ್ಲಿ ಬಿಟ್ಟರೆ ಜೂನ್ 16ಕ್ಕಿಂತ ಮುನ್ನ ದೆಹಲಿಯಲ್ಲಿ ಈ ಮೊದಲು ಮಾನ್ಸೂನ್ ಪ್ರವೇಶಿಸಿರಲಿಲ್ಲ.
ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಉತ್ತರಖಾಂಡ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ಮಾನ್ಸೂನ್ ಆಗಮನವನ್ನು ಈಗಾಗಲೇ ದೃಢಪಡಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಕಡು ಉಷ್ಣತೆಯಿಂದ ಕಂಗೆಟ್ಟಿದ್ದ ದೆಹಲಿಯು ಮಾನ್ಸೂನ್ ಪೂರ್ವ ಮಳೆಯ ಆಗಮನದಿಂದಾಗಿ ಆಹ್ಲಾದಕರ ವಾತಾವರಣವನ್ನು ಹೊಂದಿದೆ.
ರವಿವಾರ ಮುಂಜಾನೆ ಕನಿಷ್ಟ ತಾಪಮಾನವು 27.5 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ಇದು ಸಾಮಾನ್ಯ ಮಟ್ಟಕ್ಕಿಂತಲೂ ಕೆಳಮಟ್ಟದಲ್ಲಿದೆ. ಅಲ್ಲದೆ ಗರಿಷ್ಠ ತಾಪಮಾನವು 33 ಡಿಗ್ರಿಯಷ್ಟಿದೆ ಎಂದು ಹವಾಮಾನ ಇಲಾಖೆಗಳು ತಿಳಿಸಿವೆ.
|