ಆರುಷಿ ಹತ್ಯೆಯ ಕುರಿತಾಗಿ ಪ್ರಸಕ್ತ ಅತಿ ಮುಖ್ಯ ವ್ಯಕ್ತಿಯಾಗಿರುವ ಆರುಷಿ ತಾಯಿ ನೂಪುರ್ ತಲ್ವಾರ್ ಅವರನ್ನು ಎರಡು ದಿನಗಳ ಹಿಂದೆ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಸಿಬಿಐ ತಿಳಿಸಿದೆ.
ನೂಪುರ್ ಅವರನ್ನು ಸುಳ್ಳು ಪತ್ತೆ ಅಪರಾಧಕ್ಕೆ ಒಳಪಡಿಸಿರುವುದರ ಅರ್ಥ ಆಕೆಯು ಶಂಕಿತ ವ್ಯಕ್ತಿಯಲ್ಲ ಎಂಬುದಾಗಿ ಸಿಬಿಐ ಸ್ಪಷ್ಟಪಡಿಸಿದೆ.
ಈ ನಡುವೆ, ಹೇಮರಾಜ್ ಮತ್ತು ಆರುಷ್ ಅವರ ಹತ್ಯೆ ನಡೆದು ತಿಂಗಳಾಗುತ್ತಾ ಬಂದರೂ, ಕೆಲವೇ ಇಬ್ಬರನ್ನು ಬಿಟ್ಟರೆ ಸಿಬಿಐ ಅಥವಾ ಪೊಲೀಸರು ಹತ್ಯೆಯೊಳಗಿನ ನಿಗೂಢತೆಯನ್ನು ಬೇಧಿಸಲು ಸಾಧ್ಯವಾಗುತ್ತಿಲ್ಲ.
ಆದರೂ, ತಲ್ವಾರ್ ಅವರ ಕಂಪೌಂಡರ್ ಕೃಷ್ಣ ಅವರ ನಂತರ, ಇನ್ನೂ ಕೆಲವು ಮಂದಿಯನ್ನು ಬಂಧಿಸುವ ಸುಳಿವನ್ನು ಸಿಬಿಐ ನೀಡಿದೆ.
ಕೊಲೆಮಾಡಿದ ಶಸ್ತ್ರಾಸ್ತ್ರಗಳು ಈಗಲೂ ತಲ್ವಾರ್ ಮನೆಯಲ್ಲಿವೆ ಎಂದು ಅಪರಿಚಿತರೊಬ್ಬರ ಸುಳಿವಿನ ಆಧಾರದಲ್ಲಿ ಶನಿವಾರ ಪೂರ್ತಿ ತನಿಖಾ ಸಂಸ್ಥೆಯು ತಲ್ವಾರ್ ಮನೆಯನ್ನು ಶೋಧಿಸುತ್ತಿತ್ತು.
|