ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪದ್ಮಪ್ರಿಯ ನಿಗೂಢ ಸಾವು  Search similar articles
ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್ ಅವರ ಪತ್ನಿ ಪತ್ನಿಪದ್ಮಪ್ರಿಯ ಅವರ ಮೃತದೇಹವು ದೆಹಲಿಯ ಹೊಟೇಲ್‌ ರೂಮ್‌ವೊಂದರಲ್ಲಿ ಭಾನುವಾರ ಪತ್ತೆಯಾಗಿದ್ದು, ಪ್ರಕರಣವು ಇನ್ನಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಎರಡು ಮಕ್ಕಳ ತಾಯಿಯಾಗಿರುವ ಪದ್ಮಪ್ರಿಯಾ(35) ಅವರ ಆತ್ಮಹತ್ಯೆಯು ಈ ಪ್ರಕರಣಕ್ಕೆ ಇನ್ನಷ್ಟು ತಿರುವನ್ನು ನೀಡಿದೆ.

ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರು ಕಳೆದ ಬುಧವಾರ ತವರಿಗೆ ತೆರಳುತ್ತೇನೆ ಎಂದು ಹೊರಟವರು ನಾಪತ್ತೆಯಾಗಿದ್ದರು. ಈ ನಡುವೆ, ಶನಿವಾರದಂದು ಕೆಲವು ಮಾಧ್ಯಮದ ಮೂಲಗಳು ಪದ್ಮಪ್ರಿಯ ಅವರು ಮಾಲೂರಿಗೆ ಸಮೀಪವಿರುವ ತಮಿಳುನಾಡು ಗಡಿಯ ಸಂಪಗೆರೆಯ ಜೈನ್‌ಫಾರಂನಲ್ಲಿ ಪದ್ಮಪ್ರಿಯಾ ಅವರನ್ನು ಪತ್ತೆ ಹಚ್ಚಲಾಗಿತ್ತು ಎಂದು ವರದಿ ಮಾಡಿದ್ದವು.

ದೆಹಲಿಯ ದ್ವಾರಕ ಹೊಟೇಲ್‌ನಲ್ಲಿ ಪದ್ಮಪ್ರಿಯಾ ಅವರು ನೇಣುಬಿಗಿದುಕೊಂಡು ಸಾವಿಗೆ ಶರಣಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ದೆಹಲಿಯ ದ್ವಾರಕಾ ನಗರದ ಶಮಾ ಅಪಾರ್ಟ್‌ಮೆಂಟಿನ 20ನೇ ನಂಬರ್ ಮನೆಯಲ್ಲಿ ಅವರು ಭಾನುವಾರ ಬೆಳಿಗ್ಗೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಪಶ್ಚಿಮ ವಲಯ ಇನ್ಸ್‌ಪೆಕ್ಟರ್ ಜನರಲ್ ಎ.ಎಂ.ಪ್ರಸಾದ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಪದ್ಮಪ್ರಿಯಾ ನಾಪತ್ತೆಯಾಗಿದ್ದರು, ಆದರೆ ಅವರ ಕಾರು ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಪತ್ತೆ ಹಚ್ಚಲಾಗಿತ್ತು, ಕಾರಿನ ಕೀ, ನಗದು, ಮೊಬೈಲ್ ಮತ್ತು ಚಿನ್ನಾಭರಣಗಳು ಕಾರಿನೊಳಗೆ ದೊರೆತಿದ್ದು, ಇದೊಂದು ಪೂರ್ವಯೋಜಿತ ಅಪಹರಣ ಎಂದು ಪೊಲೀಸರು ಶಂಕಿಸಿದ್ದರು.

ಪತ್ನಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಶಾಸಕ ರಘುಪತಿ ಭಟ್ ಮತ್ತು ಕರ್ನಾಟಕದ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ದೆಹಲಿಗೆ ತೆರಳಿದ್ದಾರೆ.

ಈ ಪ್ರಕರಣದ ಹಿಂದೆ ಉಡುಪಿಯ ಜಿ.ಪಂ.ಸ್ಟೋರ್ ಕೀಪರ್ ಅತುಲ್ ಎಂಬುವರ ಕೈವಾಡವಿರುವುದು ಸ್ಪಷ್ಟವಾಗಿದೆ. ಅವರ ಪ್ಲಾಟ್‌ನಲ್ಲೇ ಆತ್ಮಹತ್ಯೆ ನಡೆದಿದೆ. ಆದರೆ ಈ ಪ್ಲಾಟ್ ಅನ್ನು ಅತುಲ್ ಬಾಡಿಗೆಗೆ ಪಡೆದಿದ್ದರೋ ಅಥವಾ ಖರೀದಿಸಿದ್ದರೋ ಎಂಬುದು ಖಚಿತಗೊಂಡಿಲ್ಲ.ಕಳೆದ 11ರಂದು ಪದ್ಮಪ್ರಿಯ ಅತುಲ್‌ನೊಂದಿಗೆ ಪರಾರಿಯಾಗಿದ್ದರು.

ಆ ಸಂಬಂಧ ಅತುಲ್‌‌ನನ್ನು ಶನಿವಾರ ಉಡುಪಿಯಲ್ಲಿ ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ ಪದ್ಮಪ್ರಿಯ ದೆಹಲಿಯಲ್ಲಿರುವುದು ಪತ್ತೆಯಾಗಿತ್ತು. ಆದರೆ ಪದ್ಮಪ್ರಿಯಾ ಅವರನ್ನು ಸುರಕ್ಷಿತವಾಗಿ ವಶಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಕೋಲಾರದ ಮಾಲೂರಿನಲ್ಲಿ ಅವರು ಪತ್ತೆಯಾಗಿದ್ದರೆಂಬ ಹೇಳಿಕೆ ನೀಡಲಾಗಿತ್ತು ಎಂದು ಇಲಾಖೆ ಸಮಜಾಯಿಷಿಕೆ ನೀಡಿದೆ.

ಈ ನಡುವೆ, ಪದ್ಮಪ್ರಿಯಾ ಅವರ ಮರಣೋತ್ತರ ಪರೀಕ್ಷೆಯನ್ನು ಸೋಮವಾರ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಆರುಷಿ ಹತ್ಯೆ: ನೂಪುರ್‌ಗೆ ಸುಳ್ಳು ಪತ್ತೆ ಪರೀಕ್ಷೆ
ದೆಹಲಿಗೆ ಮಾನ್ಸೂನ್ ಪ್ರವೇಶ
ಬಿಜೆಪಿ ಪ್ರಚಾರಕ್ಕೆ ಯುಪಿಎ ಹೇಳಿಕೆಗಳ ಬಳಕೆ
ಅರುಷಿ ಪ್ರಕರಣ: ಕೃಷ್ಣ 3 ದಿನ ಸಿಬಿಐ ವಶಕ್ಕೆ
ಬಗ್ಗದ ಗೂರ್ಖಾ ನಾಯಕರು: ಎಡಪಕ್ಷ ವಿಫಲ
ಗುಜ್ಜಾರ್ ವಿವಾದ: ಮೀನಾ ರಾಜೀನಾಮೆ