ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಲಾಬಸ್ಸಿನಲ್ಲೇ ಪುಟ್ಟ ಬಾಲೆಯ ಮೇಲೆ ಅತ್ಯಾಚಾರ  Search similar articles
ಹೈದರಾಬಾದಿನ ಲೋಯೆಲ್ಲಾ ಕಾನ್ವೆಂಟ್ ಹೈಸ್ಕೂಲ್‌ನ ಆರರ ಹರೆಯದ ಬಾಲಕಿಯೊಬ್ಬಳ ಮೇಲೆ, ಸೋಮವಾರ ಶಾಲಾಬಸ್ಸಿನಲ್ಲೇ ಅತ್ಯಾಚಾರ ಮಾಡಿರುವುದಾಗಿ ವರದಿಯಾಗಿದೆ.

ಬಾಲಕಿಯು ಶಾಲೆಯಿಂದ ಮರಳುತ್ತಿರುವ ವೇಳೆಗೆ ಈ ದುಷ್ಕೃತ್ಯ ಎಸಗಲಾಗಿದೆ ಎನ್ನಲಾಗಿದೆ. ಬಾಲಕಿಯ ಮನೆಯು ಕೊನೆಯಲ್ಲಿದ್ದ ಕಾರಣ, ಬಸ್ಸಿನಲ್ಲಿ ಚಾಲಕನೊಂದಿಗೆ ಈ ಮಗು ಮಾತ್ರವಿತ್ತು. ಬಸ್ಸಿನ ಚಾಲಕನ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿದ್ದು, ಒಂದು ಪ್ರಕರಣ ಮಾಯುವ ಮುನ್ನವೇ ಇನ್ನೊಂದು ಪ್ರಕರಣ ಕೇಳಿಬರುತ್ತಿದೆ. ಕೇವಲ ಆರು ತಿಂಗಳ ಹಿಂದೆ ಬಸ್ಸಿನ ಅಟೆಂಡರ್ ಎಲ್‌ಬಿ ನಗರದಲ್ಲಿ ಇನ್ನೋರ್ವ ಆರರ ಹರೆಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ.

ಮಲ ತಂದೆಯಿಂದಲೇ ಅತ್ಯಾಚಾರ
ಮೊನ್ನೆಮೊನ್ನೆ, 13ರ ಹರೆಯದ ಬಾಲಕಿಯೊಬ್ಬಾಕೆಯನ್ನು ಆಕೆಯ ಮಲತಂದೆಯೇ ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡಿದ್ದ. ಆತನನ್ನು ಅತ್ಯಾಚಾರ ಹಾಗೂ ಹಲ್ಲೆ ಆರೋಪದ ಮೇಲೆ ಬಂಧಿಸಲಾಗಿದೆ.

ಈತನನ್ನು ಶನಿವಾರ ಅಪರಾಹ್ನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಹುಡುಗಿಯನ್ನು ರಿಮಾಂಡ್ ಹೋಂಗೆ ಕಳುಹಿಸಲಾಗಿದ್ದು, ಸಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದು ಎಂದು ವರದಿ ತಿಳಿಸಿದೆ.

ಈ ನತದೃಷ್ಟೆಯು, ಮಲತಂದೆಯೊಂದಿಗೆ ತನ್ನ ಹೆತ್ತತಾಯಿಯಿಂದಲೂ ಪೀಡನೆಗೆ ಒಳಗಾಗಿದ್ದಳು. ತನ್ನ ತಾತನಿಂದ ಬಂದಿದ್ದ ತುಂಡುನೆಲದ ಮೇಲಿನ ಹಕ್ಕನ್ನು ಬಿಟ್ಟುಕೊಡಬೇಕೆಂದು ಆ ಇಬ್ಬರು ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.
ಮತ್ತಷ್ಟು
ಗೂರ್ಖಾಲ್ಯಾಂಡ್‌: ಮುಷ್ಕರ ಮುಂದರಿಕೆ
ತಾಕತ್ತಿದ್ದರೆ ನೇಣಿಗೇರಿಸಿ: ಕಾಂಗ್ರೆಸ್‌ಗೆ ಮೋದಿ ಸವಾಲು
ತ.ನಾ: ಸಿಲಿಂಡರೊಂದಕ್ಕೆ 30 ರೂ ಸಬ್ಸಿಡಿ
ಪದ್ಮಪ್ರಿಯ ನಿಗೂಢ ಸಾವು
ಆರುಷಿ ಹತ್ಯೆ: ನೂಪುರ್‌ಗೆ ಸುಳ್ಳು ಪತ್ತೆ ಪರೀಕ್ಷೆ
ದೆಹಲಿಗೆ ಮಾನ್ಸೂನ್ ಪ್ರವೇಶ