ಕೇಂದ್ರ ಮೀಸಲು ಪಡೆಯ ಸೈನಿಕರ ಬಿಗಿ ಭದ್ರತೆಯೊಂದಿಗೆ, ಪ್ರಸಿದ್ಧ ಕ್ಷೇತ್ರ ಅಮರನಾಥ ಯಾತ್ರೆಯು ಮಂಗಳವಾರ ಆರಂಭಗೊಂಡಿದೆ.
ಪ್ರಸಿದ್ಧ ಹಿಮಲಿಂಗದ ದರ್ಶನಕ್ಕಾಗಿ ಎರಡು ತಿಂಗಳ ಕಾಲ ನಡೆಯಲಿರುವ ಈ ಯಾತ್ರೆಯಲ್ಲಿ ಸುಮಾರು ಎರಡು ಲಕ್ಷ ಯಾತ್ರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಉತ್ತರ ಕಾಶ್ಮೀರಿಂದ ಸುಮಾರು 6000 ಕೇಂದ್ರ ಮೀಸಲು ಪಡೆಯ ಭದ್ರತೆಯೊಂದಿಗೆ ಇಂದು ಅಮರನಾಥ ಯಾತ್ರೆಯನ್ನು ಪ್ರಾರಂಭಿಸಲಿದ್ದು, ಬಸ್, ಟ್ರಕ್ ಮತ್ತು ಸಣ್ಣ ವಾಹನಗಳು ಭಕ್ತಾದಿಗಳನ್ನು ಸ್ಥಳಕ್ಕೆ ಸಾಗಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 4000 ಯಾತ್ರಾರ್ಥಿಗಳು ಈಗಾಗಲೇ ಆಗಮಿಸಿದ್ದು, ಜಮ್ಮುವಿನ ಭಗವತಿ ನಗರ ಪ್ರದೇಶದ ಅಮರನಾಥ ಕ್ಯಾಂಪ್‌ನಲ್ಲಿ ತಂಗಿದ್ದಾರೆ. ಹಿಮಲಿಂಗದ ದರ್ಶನ ಪಡೆಯಲು ಸುಮಾರು 300 ಸಾಧುಗಳು ಕೂಡಾ ಜಮ್ಮುವಿಗೆ ಆಗಮಿಸಿದ್ದಾರೆ.
|