ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ: ಪ್ರಣಬ್- ಕಾರಟ್ ಮಾತುಕತೆ  Search similar articles
PIB
ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ, ಸೋಮವಾರ ರಾತ್ರಿ ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಅವರನ್ನು ಭೇಟಿಯಾಗಿ ಅಣು ಒಪ್ಪಂದ ಕುರಿತಂತೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಐಎಇಎಯೊಂದಿಗೆ ನಿರ್ದಿಷ್ಟ ಸುರಕ್ಷಾ ಒಪ್ಪಂದವನ್ನು ಅಂತಿಮಗೊಳಿಸಲು ಅವರು ಬೆಂಬಲ ಕೋರಿದರು. ಈ ಒಪ್ಪಂದವು ಅಮೆರಿಕದೊಂದಿಗೆ ಅಣು ಒಪ್ಪಂದವನ್ನು ಅಂತಿಮಗೊಳಿಸಲು ಪ್ರಮುಖ ಹೆಜ್ಜೆಯಾಗಿದೆ.

ಪ್ರಣಬ್ ಮುಖರ್ಜಿ ಅವರು ಯುಪಿಎ-ಎಡ ಪಕ್ಷಗಳ 15 ಸದಸ್ಯರ ಅಣು ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಪ್ರಕಾಶ್ ಕಾರಟ್ ಜತೆಗಿನ ಭೇಟಿಯ ವೇಳೆಯಲ್ಲಿ, ಅಣುಒಪ್ಪಂದದಲ್ಲಿ ಮುಂದುವರಿಯಲು ಸರಕಾರವನ್ನು ಬೆಂಬಲಿಸುವಂತೆ ಒತ್ತಾಯಿಸಿದರು ಎಂದು ಮೂಲಗಳು ಹೇಳಿವೆ. ಐಎಇಎ ನಿರ್ದೇಶಕ ಮೊಹಮದ್ ಅಲ್ ಬರಾದಿ ಅವರ ಸೇವಾವಧಿಯು ಜುಲೈ ತಿಂಗಳಲ್ಲಿ ಸಂಪೂರ್ಣವಾಗಲಿದ್ದು ಈ ಮೊದಲು ಸುರಕ್ಷತಾ ಒಪ್ಪಂದನ್ನು ಅಂತಿಮಗೊಳಿಸಲು ಪ್ರಣಬ್ ಎಡಪಕ್ಷಗಳ ಸಹಾಯ ಯಾಚಿಸಿದರೆನ್ನಲಾಗಿದೆ.

ಬುಧವಾರ ಯುಪಿಎ ಮತ್ತು ಎಡಪಕ್ಷಗಳು ಅತ್ಯಂತ ಪ್ರಮುಖ ಸಭೆಯೊಂದನ್ನು ನಡೆಸಲಿದ್ದು ಈ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವ ಬಂದಿದೆ.
ಕೇಂದ್ರ ಸಂಪುಟದಲ್ಲಿ ಮನಮೋಹನ್ ಸಿಂಗ್ ಬಳಿಕ ಅತ್ಯಂತ ಪ್ರಧಾನ ಸದಸ್ಯರಾಗಿರುವ ಮುಖರ್ಜಿ ಅವರು, ತನ್ನ ಭೇಟಿವೇಳೆ ಸರಕಾರದ ಮೇಳೆ ವಿಶ್ವಾಸವಿರಿಸುವಂತೆ ಕಾರಟ್ ಅವರನ್ನು ಕೋರಿದರೆನ್ನಲಾಗಿದೆ. ಅದಲ್ಲದೆ ಇದುವರೆಗೆ ಸರಕಾರ ಎಡಪಕ್ಷಗಳ ಒಪ್ಪಿಗೆ ಇಲ್ಲದೆ ಯಾವುದೇ ಕಾರ್ಯವನ್ನು ಕೈಗೊಂಡಿಲ್ಲ ಎಂದು ಮನವರಿಕೆ ಮಾಡಲು ಯತ್ನಿಸಿದರು ಎಂದೂ ಮೂಲಗಳು ತಿಳಿಸಿವೆ.
ಮತ್ತಷ್ಟು
ಇಂದು ಅಮರನಾಥ ಯಾತ್ರೆ ಪ್ರಾರಂಭ
ಮೇಲ್ಮನೆ ಚುನಾವಣೆ: 'ಕೈ' ಜೋಡಿಸಿದ ಜೆಡಿಎಸ್
ಶಾಲಾಬಸ್ಸಿನಲ್ಲೇ ಪುಟ್ಟ ಬಾಲೆಯ ಮೇಲೆ ಅತ್ಯಾಚಾರ
ಗೂರ್ಖಾಲ್ಯಾಂಡ್‌: ಮುಷ್ಕರ ಮುಂದರಿಕೆ
ತಾಕತ್ತಿದ್ದರೆ ನೇಣಿಗೇರಿಸಿ: ಕಾಂಗ್ರೆಸ್‌ಗೆ ಮೋದಿ ಸವಾಲು
ತ.ನಾ: ಸಿಲಿಂಡರೊಂದಕ್ಕೆ 30 ರೂ ಸಬ್ಸಿಡಿ