ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೂರ್ಖಾಲ್ಯಾಂಡ್: ಬಂದ್‌ನಿಂದ ಜನಜೀವನ ಅಸ್ತವ್ಯಸ್ತ  Search similar articles
ಪ್ರತ್ಯೇಕ ಗೂರ್ಖಾಲ್ಯಾಂಡ್‌ ರಾಜ್ಯಕ್ಕೆ ಒತ್ತಾಯಿಸಿ ಚಳುವಳಿ ನಿರತವಾಗಿರುವ ಗೂರ್ಖಾ ಜನಮುಕ್ತಿ ಮೋರ್ಚಾ ಸೋಮವಾರ ಸಂಜೆಯಿಂದ ಮತ್ತೆ ಅನಿರ್ದಿಷ್ಠಾವಧಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಐದು ದಿನಗಳ ವಿರಾಮದ ನಂತರ ಸೋಮವಾರ ಸಂಜೆ 6 ಗಂಟೆಯಿಂದ ಬಂದ್ ಆರಂಭಗೊಂಡಿದ್ದು, ಮಂಗಳವಾರ ಅಂಗಡಿ ಮುಗ್ಗಟ್ಟು, ಬ್ಯಾಂಕ್ ಮತ್ತು ಅಂಚೆಕಚೇರಿಗಳು ಬಂದ್ ಆಗಿವೆ. ಮುಷ್ಕರದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನಗಳ ಓಡಾಟ ವಿರಳವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಳಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರಕಾರದ ಕಚೇರಿಗಳಿಗೂ ಬಂದ್ ಬಿಸಿ ಮುಟ್ಟಿದೆ. ಬಂದ್‌‌ನಿಂದಾಗಿ ಪ್ರವಾಸಿ ತಾಣವಾಗಿರುವ ಡಾರ್ಜಿಲಿಂಗ್‌‌ ಪ್ರವಾಸಿ ಗರಿಲ್ಲದೆ ಭಣಗುಟ್ಟುತ್ತಿದೆ. ಆದರೆ ಚಹಾ ತೋಟದ ಕಾರ್ಮಿಕರು ಮತ್ತು ಕೆಲಸ, ಶಾಲಾ-ಕಾಲೇಜುಗಳಿಗೆ ಬಂದ್‌‌ನಿಂದ ವಿನಾಯಿತಿ ನೀಡಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿರುವುದಾಗಿ ಪೊಲೀಸ್ ಮಹಾನಿರ್ದೇಶಕ ಕೆ.ಎಲ್.ತಾಮ್ಟಾ ತಿಳಿಸಿದ್ದಾರೆ.

ಏತನ್ಮಧ್ಯೆ, ಪ್ರತ್ಯೇಕ ಗೂರ್ಖಾಲ್ಯಾಂಡ್ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ, ಪಶ್ಚಿಮಬಂಗಾಳ ಮತ್ತು ಜಿಜೆಎಂ ಒಳಗೊಂಡಂತೆ ತ್ರಿಪಕ್ಷೀಯ ಮಾತುಕತೆಗೆ ಸಿದ್ದವಿರುವುದಾಗಿ ತಿಳಿಸಿರುವ ಜಿಜೆಎಂನ ಪ್ರಧಾನ ಕಾರ್ಯದರ್ಶಿ ರೋಶನ್ ಗಿರಿ, ಈ ರಾಜಕೀಯ ವಿವಾದಕ್ಕೆ ನಮಗೆ ರಾಜಕೀಯವಾಗಿಯೇ ಪರಿಹಾರ ಲಭಿಸಬೇಕಾಗಿದೆ ಎಂದು ಹೇಳಿದ್ದರು.

ಸೋಮವವಾರ ಸಂಜೆಯಿಂದ ಎರಡನೆ ಹಂತದ ಅನಿರ್ದಿಷ್ಟಾವಧಿ ಬಂದ್ ಆರಂಭಿಸಿದ್ದು ಬಂದ್‌ಗೆ ಇತರ ಸಂಘಟನೆಗಳು ಬೆಂಬಲ ವ್ಯಕ್ತವಪಡಿಸಿವೆ. ಅಮರ್ ಬೆಂಗಾಲಿ, ಜಮ ಜಾಗರಣಾ ಮಂಚ್ ಮತ್ತು ಇನ್ನಿತರ ಸಂಘಟನೆಗಳು ಬೆಂಬಲಿಸಿದ್ದು, ಚಳುವಳಿಯನ್ನು ಇನ್ನಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಸರದಿ ಉಪವಾಸ ಸತ್ಯಾಗ್ರಹ ಹೂಡುವುದಾಗಿಯೂ ಸಂಘಟನೆಗಳು ಹೇಳಿವೆ.
ಮತ್ತಷ್ಟು
ಅಣು ಒಪ್ಪಂದ: ಪ್ರಣಬ್- ಕಾರಟ್ ಮಾತುಕತೆ
ಇಂದು ಅಮರನಾಥ ಯಾತ್ರೆ ಪ್ರಾರಂಭ
ಮೇಲ್ಮನೆ ಚುನಾವಣೆ: 'ಕೈ' ಜೋಡಿಸಿದ ಜೆಡಿಎಸ್
ಶಾಲಾಬಸ್ಸಿನಲ್ಲೇ ಪುಟ್ಟ ಬಾಲೆಯ ಮೇಲೆ ಅತ್ಯಾಚಾರ
ಗೂರ್ಖಾಲ್ಯಾಂಡ್‌: ಮುಷ್ಕರ ಮುಂದರಿಕೆ
ತಾಕತ್ತಿದ್ದರೆ ನೇಣಿಗೇರಿಸಿ: ಕಾಂಗ್ರೆಸ್‌ಗೆ ಮೋದಿ ಸವಾಲು