ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಒರಿಸ್ಸಾದ ಉತ್ತರ ಮತ್ತು ಕರಾವಳಿ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತತ್ತರಿಸಿರುವ ಜನತೆಯ ಸಹಾಯಕ್ಕಾಗಿ ಸೇನೆಯು ಒರಿಸ್ಸಾಗೆ ಧಾವಿಸಿದೆ.
ಭಾನುವಾರ ಮಧ್ನಾಹ್ನ ಭುವನೇಶ್ವರದಲ್ಲಿ ಮಳೆ ಆರಂಭಗೊಂಡಿದ್ದು, ಮಂಗಳವಾರವೂ ಮುಂದುವರಿದಿದೆ. ಅಲ್ಲದೇ ಬಲೇಶ್ವರ್ ಮತ್ತು ಮಯೂ ರ್‌ಬಂಜ್ ಜಿಲ್ಲೆಗಳಲ್ಲಿ ಧಾರಾಕಾರ ಮಳೆಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಇಲ್ಲಿನ ಜಲಂಕಾ ನದಿ ಈಗಾಗಲೇ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಅಲ್ಲದೇ ಮುಂದಿನ 24 ಗಂಟೆಗಳ ಕಾಲ ಈ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖಾ ತಜ್ಞರು ತಿಳಿಸಿದ್ದಾರೆ. ಭಾರೀ ಗಾಳಿ-ಮಳೆಯ ಕಾರಣದಿಂದಾಗಿ ಮೀನುಗಾರರು ಕಡಲಿಗಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.
|