ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೂರ್ಖಾ ಸರ್ವಪಕ್ಷ ಸಭೆ, ಸಿಪಿಎಂಗೆ ಆಹ್ವಾನವಿಲ್ಲ  Search similar articles
ಡಾರ್ಜಿಲಿಂಗ್‌ನಲ್ಲಿ ಮಂಗಳವಾರ ಮುಂಜಾನೆ ಗೂರ್ಖಾ ಜನಮುಕ್ತಿ ಮೋರ್ಚಾದೊಂದಿಗೆ ಸರ್ವಪಕ್ಷ ಸರ್ವಪಕ್ಷ ಸಭೆ ಆರಂಭವಾಗಿದ್ದು, ಸಭೆಗೆ ಸಿಪಿಎಂ ಪಕ್ಷವನ್ನು ಆಹ್ವಾನಿಸಲಾಗಿಲ್ಲ.

ಸಿಕ್ಕಿಂ ಡೆಮಾಕ್ರೆಟಿಕ್ ಫ್ರಂಟ್, ಸಿಕ್ಕಿಂ ರಾಷ್ಟ್ರೀಯ ಕಾಂಗ್ರೆಸ್, ಅಖಿಲ ಭಾರತೀಯ ಮುಸ್ಲಿಂ ಲೀಗ್, ಅಖಿಲ ಭಾರತೀಯ ಗೂರ್ಖಾ ಲೀಗ್ ಕ್ರಾಂತಿಕಾರಿ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸಿಸ್ಟ್), ಭಾರತೀಯ ಜನತಾಪಕ್ಷ ಮತ್ತು ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿರುವ ಪಕ್ಷಗಳಾಗಿವೆ.

ಗೂರ್ಖಾ ರಾಷ್ಟ್ರೀಯ ಮುಕ್ತಿ ರಂಗದ ಮುಖ್ಯಸ್ಥ ಸುಭಾಷ್ ಗೈಸಿಂಗ್ ಮತ್ತು ಸಿಪಿಐ-ಎಂ ಪಕ್ಷವನ್ನು ಮಾತುಕತೆಗೆ ಆಹ್ವಾನಿಸಿಲ್ಲ.
ಗೂರ್ಖಾ ನಾಯಕರು ಮತ್ತು ಪಶ್ಚಿಮ ಬಂಗಾಳ ಸರಕಾರದ ನಡುವೆ ಮಾತುಕತೆ ಆರಂಭವಾಗಿದ್ದರೂ, ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರಕಾರ ಮತ್ತು ಗೂರ್ಖಾ ನಾಯಕರ ನಡುವಿನ ಬಿಕ್ಕಟ್ಟು ಹಾಗೆಯೇ ಮುಂದುವರಿದಿದೆ.

ಏತನ್ಮಧ್ಯೆ, ಸೋಮವಾರ ಸಂಜೆಯಿಂದ ಗೂರ್ಖಾ ಜನಮುಕ್ತಿ ಮೋರ್ಚಾ ಅನಿರ್ಧಿಷ್ಟಾವಧಿ ಬಂದ್ ಮುಂದುವರಿಸಿದೆ. ಡಾರ್ಜಲಿಂಗ್, ಕಲಿಮ್ಪಾಂಗ್ ಮತ್ತು ಕುರ್ಸೆಂಗ್ ಉಪವಿಭಾಗಗಳಲ್ಲಿ ಬಂದ್ ಆಚರಣೆ ಜಾರಿಯಲ್ಲಿದ್ದು, ಸಿಕ್ಕಿಂ ಮತ್ತು ಡಾರ್ಜಿಲಿಂಗ್‌ಗಳಿಗೆ ಅಗತ್ಯವಸ್ತುಗಳ ಪೂರೈಕೆ ಕುರಿತು ಅನಿಶ್ಚಿತತೆ ತಲೆದೋರಿದೆ.

ತನ್ನ ಕಾರ್ಯಕರ್ತರು ಬಂದ್ ವೇಳೆಗೆ ಶಸ್ತ್ರಾಸ್ತ್ರಗಳನ್ನು ತಮ್ ಜತೆಗೆ ಒಯ್ಯುತ್ತಾರೆ ಎಂದು ಗೂರ್ಖಾ ಜನಮುಕ್ತಿ ಮೋರ್ಚಾ ಸಂಘಟನೆ ಹೇಳಿದೆ. ಬಂದ್ ಹಿನ್ನೆಲೆಯಲ್ಲಿ ಆಡಳಿತೆಯು ಬಂದ್ ಪರಿಣಮಿತ ಪ್ರದೇಶದಲ್ಲಿ ಪ್ರತಿಬಂಧಕಾಜ್ಞೆ ಹೇರಿದೆ.

ಈ ಮಧ್ಯೆ, ಈ ವಿಷಯವನ್ನು ಕೇಂದ್ರ ಸರಕಾರದೊಂದಿಗೆ ಚರ್ಚಿಸಬೇಕೆಂಬುದಾಗಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಮಾತುಕತೆಗೆ ಕರೆನೀಡಿರುವುದನ್ನು ಗೂರ್ಖಾ ಜನಮುಕ್ತಿ ಮೋರ್ಚಾ ತಳ್ಳಿಹಾಕಿದೆ.

ಗೂರ್ಖಾಗಳು ಪಶ್ಚಿಮ ಬಂಗಾಳದ ಉತ್ತರದ ಭಾಗವನ್ನು ಪ್ರತ್ಯೇಕ ರಾಜ್ಯವಾಗಿಸಬೇಕು ಎಂದು ಒತ್ತಾಯಿಸಿ ಸರಿಸುಮಾರು ಎರಡು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ.
ಮತ್ತಷ್ಟು
ಮಳೆಗೆ ತತ್ತರಿಸಿದ ಒರಿಸ್ಸಾಗೆ ಸೇನೆ
ಗೂರ್ಖಾಲ್ಯಾಂಡ್: ಬಂದ್‌ನಿಂದ ಜನಜೀವನ ಅಸ್ತವ್ಯಸ್ತ
ಅಣು ಒಪ್ಪಂದ: ಪ್ರಣಬ್- ಕಾರಟ್ ಮಾತುಕತೆ
ಇಂದು ಅಮರನಾಥ ಯಾತ್ರೆ ಪ್ರಾರಂಭ
ಮೇಲ್ಮನೆ ಚುನಾವಣೆ: 'ಕೈ' ಜೋಡಿಸಿದ ಜೆಡಿಎಸ್
ಶಾಲಾಬಸ್ಸಿನಲ್ಲೇ ಪುಟ್ಟ ಬಾಲೆಯ ಮೇಲೆ ಅತ್ಯಾಚಾರ