ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪ್ರಾಪ್ತವಯಸ್ಕರ ವಾಹನ ಚಾಲನೆ: ಹೆತ್ತವರ ಮೇಲೆ ರೇಣುಕಾ ಕಣ್ಣು  Search similar articles
PIB
ಅಪ್ರಾಪ್ತ ವಯಸ್ಕರು ಚಲಾಯಿಸುತ್ತಿರುವ ವಾಹನಗಳು ಅಪಘಾತಕ್ಕೀಡಾಗುವ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಮಕ್ಕಳ ಹೆತ್ತವರ ವಿರುದ್ಧ ಗರಂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ಕೇಂದ್ರ ಸಚಿವೆ ರೇಣುಕಾ ಚೌಧರಿ, ಇಂತಹ ಹೆತ್ತವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಯೋಚಿಸುತ್ತಿದ್ದಾರೆ.

ಅಪಘಾತಕ್ಕೊಳಗಾಗುತ್ತಿರುವ ಅಪ್ರಾಪ್ತವಯಸ್ಕ ಮಕ್ಕಳ ಹೆತ್ತವರ ವಿರುದ್ಧ ಕ್ರಮಕೈಗೊಳ್ಳುವಂತೆ ರಸ್ತೆ ಸಾರಿಗೆ ಸಚಿವಾಯಲಯಕ್ಕೆ ಪತ್ರಬರೆಯುವುದಾಗಿ ಅವರು ಹೇಳಿದ್ದಾರೆ.

ಗುರ್‌ಗಾಂವ್ ಎಕ್ಸ್‌ಪ್ರೆಸ್‌ವೇಯಲ್ಲಿ ಮೂವರು ಬಾಲಕರೊಂದಿಗೆ ಇನ್ನೊಬ್ಬ ಅಪ್ರಾಪ್ತ ವಯಸ್ಕ ಯುವಕ ಚಲಾಯಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೊಳಗಾಗಿರುವ ಇತ್ತೀಚಿನ ಘಟನೆಗೆ ಪ್ರತಿಕ್ರಿಯಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೌಕರ್ಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಕೇಂದ್ರವು ಸಚಿವಾಲಯದ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಿದೆ.

ಸಣ್ಣಪುಟ್ಟ ತಪ್ಪುಗಳಿಂದಾಗುವ ಅಪಾಯಗಳ ಕುರಿತು ಮಕ್ಕಳಿಗೆ ತಿಳಿದಿರುವುದಿಲ್ಲ. ಹಾಗಾಗಿ, ರಸ್ತೆ ಸಾರಿಗೆ ಸಚಿವಾಲಯವು ಕಾನೂನಿಗೆ ತಿದ್ದುಪಡಿ ಮಾಡಿ, ಕಾನೂನಿನ ಕಕ್ಷೆಯೊಳಕ್ಕೆ ಇಂತಹ ಮಕ್ಕಳ ಹೆತ್ತವರನ್ನು ತರಬೇಕು ಎಂದು ಅವರು ನುಡಿದರು.

ಇದು ಮಕ್ಕಳ ತಪ್ಪಲ್ಲ. ಹೆತ್ತವರು ಅಪ್ರಾಪ್ತವಯಸ್ಕ ಮಕ್ಕಳು ವಾಹನ ಚಲಾಯಿಸದಂತೆ ತಡೆಯಬೇಕು. ಇದೇ ಕಾರಣಕ್ಕಾಗಿ ಅಪ್ರಾಪ್ತ ವಯಸ್ಕ ಮಕ್ಕಳಿಗೆ ಮತದಾನಕ್ಕೆ, ಮದ್ಯಪಾನಕ್ಕೆ ಅವಕಾಶ ನೀಡಲಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ತಂದೆಯ ಲೈಸನ್ಸ್‌ ಮುಟ್ಟುಗೋಲು ಹಾಕಿದರೆ ಮಾತ್ರ ಇಂತಹ ಪ್ರಕರಣಗಳನ್ನು ತಡೆಯಬಹುದು ಎಂದು ಸಚಿವೆ ಹೇಳಿದ್ದಾರೆ.
ಮತ್ತಷ್ಟು
ಗೂರ್ಖಾ ಸರ್ವಪಕ್ಷ ಸಭೆ, ಸಿಪಿಎಂಗೆ ಆಹ್ವಾನವಿಲ್ಲ
ಮಳೆಗೆ ತತ್ತರಿಸಿದ ಒರಿಸ್ಸಾಗೆ ಸೇನೆ
ಗೂರ್ಖಾಲ್ಯಾಂಡ್: ಬಂದ್‌ನಿಂದ ಜನಜೀವನ ಅಸ್ತವ್ಯಸ್ತ
ಅಣು ಒಪ್ಪಂದ: ಪ್ರಣಬ್- ಕಾರಟ್ ಮಾತುಕತೆ
ಅಮರನಾಥ ಯಾತ್ರೆ ಪ್ರಾರಂಭ
ಮೇಲ್ಮನೆ ಚುನಾವಣೆ: 'ಕೈ' ಜೋಡಿಸಿದ ಜೆಡಿಎಸ್