ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿಎಂಕೆ - ಡಿಎಂಕೆ ಬಾಯ್ ಬಾಯ್!  Search similar articles
PTI
ಸಂಯುಕ್ತ ಪ್ರಗತಿಪರ ಮೈತ್ರಿಕೂಟ(ಯುಪಿಎ)ದ ಪ್ರಮುಖ ಎರಡು ಅಂಗಪಕ್ಷಗಳಾದ ಕರುಣಾನಿಧಿ ನೇತೃತ್ವದ ಡಿಎಂಕೆಯು ತನ್ನ ಮಿತ್ರಪಕ್ಷ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರ ಪಿಎಂಕೆಯೊಂದಿಗೆ ಮುನಿಸಿಕೊಂಡಿದ್ದು ಮಂಗಳವಾರ ಎರಡೂ ಪಕ್ಷಗಳು ಅಧಿಕೃತವಾಗಿ ದೂರದೂರವಾಗಿವೆ.

ಡಿಎಂಕೆಯು ಚೆನ್ನೈಯಲ್ಲಿ ತನ್ನ ಪಕ್ಷದ ಸಭೆ ನಡೆಸಿದ ವೇಳೆ ಈ ನಿರ್ಧಾರ ಕೈಗೊಂಡಿದೆ. ತಮ್ಮೊಳಗಿನ ಬಂಧನ ಗಂಟನ್ನು ಸಡಿಲಿಸುವುದಾಗಿ ನೀಡಿರುವ ಹೇಳಿಕೆಯಲ್ಲಿ "ಪಿಎಂಕೆಯೊಂದಿಗೆ ಮೈತ್ರಿ ಮುಂದುವರಿಕೆ ಸಾಧ್ಯವೇ ಇಲ್ಲ" ಎಂದು ಡಿಎಂಕೆ ಹೇಳಿದೆ.

ಆದರೆ, ಮಿತ್ರರೊಳಗಿನ ಈ ಬಿರುಕು ತಮಿಳ್ನಾಡು ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ತಮಿಳ್ನಾಡು ಶಾಸನ ಸಭೆಯಲ್ಲಿ ಪಿಎಂಕೆಯ 18 ಶಾಸಕರು ಮಾತ್ರ ಇರುವಕಾರಣ ಸರಕಾರಕ್ಕೆ ಯಾವುದೇ ತೊಂದರೆಯಾಗದು.

ಏತನ್ಮಧ್ಯೆ, ತಮ್ಮ ಈ ಬಿರುಕನ್ನು ಕೇಂದ್ರದ ಮಟ್ಟಕ್ಕೆ ಒಯ್ಯುವುದಿಲ್ಲ ಎಂದು ಎರಡೂ ಪಕ್ಷಗಳು ಹೇಳಿವೆ. ಪಿಎಂಕೆಯನ್ನು ಹೊರಹಾಕುವಂತೆ ವಿನಂತಿಸಿರುವುದಿಲ್ಲ ಎಂದು ಡಿಎಂಕೆ ಸ್ಪಷ್ಟಪಡಿಸಿದೆ. ಇದಲ್ಲದೆ ತನ್ನ ಪಕ್ಷದ ಇಬ್ಬರೂ ಸಚಿವರು ಕೇಂದ್ರದಲ್ಲಿ ಮುಂದುವರಿಯುವುದಾಗಿ ಪಿಎಂಕೆ ಮುಖ್ಯಸ್ಥ ರಾಮದಾಸ್ ಹೇಳಿದ್ದಾರೆ. ರಾಮದಾಸ್ ಅವರು ಕೇಂದ್ರ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾರೆ.

ಉಭಯ ಪಕ್ಷಗಳ ನಡುವೆ ಕಳೆದ ಕೆಲ ಸಮಯಗಳಿಂದ ವಾಗ್ಯುದ್ಧಗಳು ನಡೆಯುತ್ತಿದ್ದು, ಭಿನ್ನಾಭಿಪ್ರಾಯಗಳು ಹೆಚ್ಚುತ್ತಲೇ ಹೋಗಿದ್ದವು. ಅಂತಿಮ ವಾಗಿ ಡಿಎಂಕೆ - ಪಿಎಂಕೆ ಬಾಯ್ ಬಾಯ್ ಹೇಳಿಕೊಂಡಿವೆ.
ಮತ್ತಷ್ಟು
ಅಪ್ರಾಪ್ತವಯಸ್ಕರ ವಾಹನ ಚಾಲನೆ: ಹೆತ್ತವರ ಮೇಲೆ ರೇಣುಕಾ ಕಣ್ಣು
ಗೂರ್ಖಾ ಸರ್ವಪಕ್ಷ ಸಭೆ, ಸಿಪಿಎಂಗೆ ಆಹ್ವಾನವಿಲ್ಲ
ಮಳೆಗೆ ತತ್ತರಿಸಿದ ಒರಿಸ್ಸಾಗೆ ಸೇನೆ
ಗೂರ್ಖಾಲ್ಯಾಂಡ್: ಬಂದ್‌ನಿಂದ ಜನಜೀವನ ಅಸ್ತವ್ಯಸ್ತ
ಅಣು ಒಪ್ಪಂದ: ಪ್ರಣಬ್- ಕಾರಟ್ ಮಾತುಕತೆ
ಅಮರನಾಥ ಯಾತ್ರೆ ಪ್ರಾರಂಭ