ಭವಿಷ್ಯದಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇಯು ಅಂತಾರಾಷ್ಟ್ರೀಯ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದನ್ನು ಸ್ಥಾಪಿಸಲಿದೆ. ಈ ಸಂಸ್ಥೆಯು ರೈಲು ವಲಯದ ಎಂಬಿಎ ಶಿಕ್ಷಣವನ್ನು ರಾಷ್ಟ್ರದಲ್ಲಿ ಒದಗಿಸಲಿದೆ.
ಇಲ್ಲಿನ ಚಾಣಕ್ಯಪುರಿಯ 30 ಸಾವಿರ ಚದರ ಕೀ.ಮೀ ವ್ಯಾಪ್ತಿಯಲ್ಲಿ, ರೈಲ್ವೇಯ ಅಂತಾರಾಷ್ಟ್ರೀಯ ಘಟಕದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ರೈಲ್ವೇವ್ಯೂಹಾತ್ಮಕ ವ್ಯವಸ್ಥಾಪನಾ ಸಂಸ್ಥೆ(ಐಆರ್ಎಸ್ಎಮ್ಐ) ಸ್ಥಾಪನೆಗೊಳ್ಳಲಿದೆ.
ಇದಕ್ಕಾಗಿ 22 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಸದ್ಯವೇ ಕಟ್ಟಡ ರಚನೆಗಾಗಿ ವಾಸ್ತುಶಿಲ್ಪಿಯೊಬ್ಬರನ್ನು ಆಯ್ಕೆಮಾಡಲಾಗುವುದು ಎಂದು ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲ್ವೇಯ ಅಂತಾರಾಷ್ಟ್ರೀಯ ಘಟಕದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ತರಬೇತಿ ಸೌಕರ್ಯ ಒದಗಿಸಲಾಗುವುದು, ತರಬೇತಿ ಶುಲ್ಕವನ್ನು ವಿವಿಧ ವಿಭಾಗಗಳಿಗನುಸಾರ ಕಟ್ಟಡ ರಚನೆ ಸಂಪೂರ್ಣವಾದ ಬಳಿಕ ನಿರ್ಣಯಿಸಲಾಗುವುದು ಎಂದು ಅವರು ತಿಳಿಸಿದರು.
|