ಹಿಂದೂ ವಿವಾಹ ಕಾಯ್ದೆಯು ಕುಟುಂಬಗಳನ್ನು ಒಗ್ಗೂಡಿಸುವ ಬದಲಾಗಿ, ವಿವಾಹ ವಿಚ್ಛೇದನಗಳ ಮೂಲಕ ಕುಟುಂಬ ಒಡೆಯುತ್ತಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಿಸಿದೆ. ನ್ಯಾಯಾಲಯಗಳಿಗೆ ಬರುತ್ತಿರುವ ವಿಚ್ಚೇದನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಜಿ. ಎಸ್. ಸಿಂಗ್ವಿ ಅವರನ್ನೊಳಗೊಂಡ ನ್ಯಾಯಪೀಠದಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ. ವಿವಾಹ ವಿಚ್ಛೇದನ ಪ್ರಕರಣಗಳು ಕೌಟುಂಬಿಕ ಮತ್ತು ಮಕ್ಕಳ ನಡುವಿನ ಸಂಬಂಧಗಳನ್ನು ಹಾಳು ಮಾಡುತ್ತದೆ. ಅಲ್ಲದೇ ಈ ರೀತಿ ಕುಟುಂಬ ಒಡೆಯುವುದು ಇಂತಹವರ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. 1955ರಲ್ಲಿ ಜಾರಿಗೆ ಬಂದಿರುವ ಹಿಂದೂ ವಿವಾಹ ಕಾಯ್ದೆ 2003ರವರೆಗೆ ಹಲವಾರು ಬಾರಿ ತಿದ್ದುಪಡಿಗೆ ಒಳಗಾಗಿದೆ. ವಿವಾಹದ ವೇಳೆಯೆ ಬಹಳಷ್ಟು ವಿಚ್ಚೇದನ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ನ್ಯಾಯಾಲಯ ಹೇಳಿದೆ.
|