ಭಾರತ-ಅಮೆರಿಕ ಕುರಿತ ಅಣು ಒಪ್ಪಂದದ ಕುರಿತಂತೆ ಇರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬುಧವಾರದಂದು ಕರೆಯಲಾಗಿದ್ದ ಬಹು ನಿರೀಕ್ಷಿತ ಸಭೆಯನ್ನು ನಾಯಕರ ಗೈರು ಹಾಜರಿಯ ಕಾರಣ ಮುಂದೂಡಲಾಗಿದೆ.
ಪ್ರಸ್ತುತ ಸಭೆಯನ್ನು ಜೂನ್ 25ರಂದು ನಡೆಸಲಾಗುವುದು ಎಂದು ಮೂಲಗಳು ಹೇಳಿವೆ. ವಿದೇಶಾಂಗ ಸಚಿವ ಶಿವಶಂಕರ ಮೆನನ್ ಅವರು, ರಾಷ್ಟ್ರಕ್ಕೆ ಭೇಟಿ ನೀಡಿರುವ ಸಿರಿಯಾ ನಿಯೋಗದೊಂದಿಗೆ ನಿರತವಾಗಿರುವ ಕಾರಣ ಅವರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಸಭೆಯನ್ನು ಮುಂದೂಡಲಾಗಿದೆ.
ಅದಾಗ್ಯೂ, ಈ ಒಪ್ಪಂದವನ್ನು ವಿರೋಧಿಸುವುದಾಗಿ ಹೇಳಿರುವ ಎಡಪಕ್ಷಗಳು ಬುಧವಾರ ಸಂಜೆ ಪರಿಸ್ಥಿತಿಯ ಪರಾಮರ್ಷೆಗಾಗಿ ಸಭೆ ಸೇರಲಿವೆ ಎಂದು ಮೂಲಗಳು ಹೇಳಿವೆ. ಐಎಇಎಯೊಂದಿಗೆ ಭಾರತ-ನಿರ್ದಿಷ್ಟ ಸುರಕ್ಷತಾ ಒಪ್ಪಂದ ಸೇರಿದಂತೆ ಒಪ್ಪಂದವನ್ನು ವಿರೋಧಿಸಲು ಎಡಪಕ್ಷಗಳು ನಿರ್ಧರಿಸಿವೆ.
|