ವೈದ್ಯಕೀಯ ಲೋಕಕ್ಕೇ ಸವಾಲೆಸೆಯುವಂತೆ, ಮಹಿಳೆಯೊಬ್ಬರು 40 ದಿವಸಗಳ ಅಂತರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಬಬಿತಾ ಎಂಬ 25ರ ಹರೆಯ ಮಹಿಳೆ ಎಪ್ರಿಲ್ 27ರಂದು ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದರು. ಬಳಿಕ ಜೂನ್ 6ರಂದು ಇನ್ನೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಎರಡೂ ಹೆರಿಗೆಯೂ ಸಹಜ ಹೆರಿಗೆಯಾಗಿದ್ದು ತಾಯಿಮಕ್ಕಳು ಆರೋಗ್ಯವಾಗಿದ್ದಾರೆ.
ನನ್ನ ಎರಡೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತದೆ. ಮಕ್ಕಳ ಜೀವಕ್ಕೆ ಅಪಾಯ ಇರಬಹುದು ಎಂದು ಹೇಳಲಾಗಿತ್ತು. ಆದರೆ ವೈದ್ಯರು ಅದ್ಭುತ ಕೆಲಸ ಮಾಡಿದ್ದಾರೆ ಎಂದು ಬಬಿತಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಈ ಹೆರಿಗೆಯನ್ನು ನಿರ್ವಹಿಸಿದ ಪ್ರಸೂತಿತಜ್ಞ ವೈದ್ಯರು ಇಂತಹ ಪ್ರಕರಣಗಳು ಬಹಳ ವಿರಳ. ಮಕ್ಕಳ ಜನನದ ದಿನಗಳಲ್ಲಿ ಅಂತರವಿದ್ದರೂ ಒಂದೇ ಗರ್ಭದಲ್ಲಿ ಬೆಳೆದ ಅವುಗಳನ್ನು ಅವಳಿಗಳೆಂದೇ ಪರಿಗಣಿಸಲಾಗುವುದು ಎಂದು ಅವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಮೊದಲ ಹೆರಿಗೆಯ ಬಳಿಕ ಅಲ್ಟ್ರಾಸೌಂಡ್ ವರದಿಯ ಮೂಲಕ, ಆಕೆಯ ಗರ್ಭದಲ್ಲಿ ಪ್ರತ್ಯೇಕವಾಗಿ ಇನ್ನೊಂದು ಮಗು ಬೆಳೆಯುತ್ತಿರುವುದು ಪತ್ತೆಯಾಯಿತು. ಆಕೆ ಬೆಳೆಯಲು ಅವಕಾಶ ನೀಡಿದೆವು. ಎರಡು ಗರ್ಭಚೀಲಗಳಿದ್ದು. ಪ್ರತ್ಯೇಕ ಮಾಸುಗಳಿದ್ದವು. ಇಂತಹ ಪ್ರಕರಣಗಳು ತುಂಬ ಅಪರೂಪ ಎಂದು ಪುಲಬಾನಿ ಜಿಲ್ಲಾ ಆಸ್ಪತ್ರೆಯ ವೈದ್ಯ ಸುರೇಂದ್ರ ಕುಮಾರ್ ಮೊಹಂತಿ ಹೇಳಿದ್ದಾರೆ.
|