ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಲ್ವಾರ್ ನ್ಯಾಯಾಂಗ ಬಂಧನ ವಿಸ್ತರಣೆ  Search similar articles
ಅರುಷಿ ಕೊಲೆ ಪ್ರಕರಣದ ಪ್ರಧಾನ ಆರೋಪಿ ಡಾ| ರಾಜೇಶ್ ತಲ್ವಾರ್ ಅವರ ನ್ಯಾಯಾಂಗ ಬಂಧನವನ್ನು ವಿಶೇಷ ಸಿಬಿಐ ನ್ಯಾಯಾಲಯವು 14 ದಿನಗಳ ಕಾಲ ವಿಸ್ತರಿಸಿದೆ.

ರಾಜೇಶ್ ಪುತ್ರಿ ಅರುಷಿ ಹಾಗೂ ಮನೆಗೆಲಸದಾಳು ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜೇಶ್ ಸಿಬಿಐ ವಶದಲ್ಲಿದ್ದಾರೆ. ತಲ್ವಾರ್‌ರನ್ನು ಇನ್ನೊಂದು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಬಿಐ ಯೋಚಸುತ್ತಿದೆ.

ಆರೋಪಿಯನ್ನು ಇನ್ನಷ್ಟು ಪರೀಕ್ಷೆಗೊಳಪಡಿಸಬೇಕು ಎಂಬ ಕಾರಣ ನೀಡಿ, ತಲ್ವಾರ್ ನ್ಯಾಯಾಂಗ ಬಂಧನದ ವಿಸ್ತರಣೆಗಾಗಿ ಸಿಬಿಐ ಮನವಿ ಮಾಡಿದ್ದು ನ್ಯಾಯಾಲಯವು ಮನವಿಯನ್ನು ಅಂಗೀಕರಿಸಿತು.

ತಲ್ವಾರ್ ಅವರ ವಕೀಲ ಸತೀಶ್ ತಮ್ಟಾ ಇದನ್ನು ತೀವ್ರವಾಗಿ ವಿರೋಧಿಸಿದ್ದು, ತಲ್ವಾರ್ ವಿರುದ್ಧ ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ ಎಂದು ವಾದಿಸಿದರು.

ತಲ್ವಾರ್ ಅವರನ್ನು ಈ ಪ್ರಕರಣದಲ್ಲಿ ಆರೋಪಿ ಎಂದು ಸಿಬಿಐ ಹೆಸರಿಸಿಲ್ಲದ ಕಾರಣ ಅವರಿಗೆ ಜಾಮೀನು ನೀಡಬೇಕು ಎಂದು ಅವರು ವಾದಿಸಿದರು. ಇವರ ವಾದವನ್ನು ಮನ್ನಿಸದ ನ್ಯಾಯಾಲಯ ತಲ್ವಾರ್ ಜಾಮೀನು ಅರ್ಜಿಯ ಕುರಿತ ತೀರ್ಪನ್ನು ಕಾಯ್ದಿರಿಸಿದೆ.
ಮತ್ತಷ್ಟು
ಅಣು: ಎಡ ಪಕ್ಷಗಳನ್ನು ಬಿಟ್ಟಾಕಲು ಸಿಂಗ್ ಸಲಹೆ
ಗುಜ್ಜಾರ್ ವಿವಾದ: ಮೀಸಲಾತಿಗೆ ಸರಕಾರ ಒಪ್ಪಿಗೆ
'ಅವಳಿ' ಹುಟ್ಟಿ 40 ದಿನದ ಬಳಿಕ ಜನಿಸಿದ 'ಜವಳಿ'
ಹಿಂದೂ ಆತ್ಮಾಹುತಿ ದಳಕ್ಕೆ ಠಾಕ್ರೆ ಕರೆ
ಅಣು ಒಪ್ಪಂದ: ಯುಪಿಎ-ಎಡಪಕ್ಷಗಳ ಸಭೆ ಮುಂದಕ್ಕೆ
ಮನೆ ಒಡಕು ಹಿಂದೂ ವಿವಾಹ ಕಾಯ್ದೆ: ಸು.ಕೋ