ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಡಿ ವಿವಾದವು ಅತ್ಯಂತ ಸೂಕ್ಷ್ಮ ವಿಚಾರ: ಚೀನಾ  Search similar articles
ಚೀನಾ ಪಡೆಗಳಿಂದ ಸಿಕ್ಕಿಂ ಅತಿಕ್ರಮಣದ ನಿರಂತರ ವರದಿಗಳ ನಡುವೆಯೂ, ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದವು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದೆ ಎಂದು ಚೀನಾವು ತಿಳಿಸಿದೆ.

ಸಿಕ್ಕಿಂನಲ್ಲಿ ಚೀನಾ ಪಡೆಯ ಅತಿಕ್ರಮಣವನ್ನು ವಿರೋಧಿಸುವುದರೊಂದಿಗೆ, ಈ ಗಡಿ ವಿವಾದವು ಈಗಾಗಲೇ ಇತ್ಯರ್ಥವಾದ ವಿಚಾರವಾಗಿದೆ ಎಂಬ ಭಾರತದ ಖಂಡನೆಗೆ ಪ್ರತಿಕ್ರಿಯೆಯಾಗಿ ಚೀನಾವು ಈ ಹೇಳಿಕೆಯನ್ನು ನೀಡಿದೆ.

ಏನೇ ಆದರೂ, ದಶಕಗಳಷ್ಟು ಹಳೆಯದಾದ ಈ ಗಡಿ ವಿವಾದವು ಉಭಯ ದೇಶಗಳ ನಡುವಿನ ಇತರ ಕ್ಷೇತ್ರಗಳಲ್ಲಿನ ಸೌಹಾರ್ದ ಸಂಬಂಧದ ಮೇಲೆ ಪರಿಣಾಮ ಬೀರದಂತೆ ಎರಡೂ ದೇಶಗಳು ಒಪ್ಪಿರುವುದಾಗಿ ಚೀನಾ ಉಪ ವಿದೇಶಾಂಗ ಸಚಿವ ವು ಡಾವಿ ಸ್ಪಷ್ಟಪಡಿಸಿದ್ದಾರೆ.

ಗಡಿ ವಿಭಾಗದಲ್ಲಿನ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಎರಡೂ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದ್ದು, ಬಾರತ ಮತ್ತು ಚೀನಾ ನಡುವಿನ ಇತರ ಕ್ಷೇತ್ರಗಳಲ್ಲಿನ ಸೌಹಾರ್ದ ಸಂಬಂಧಗಳ ಮೇಲೆ ಈ ಗಡಿ ವಿವಾದವು ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಭಾರತ ಮತ್ತು ಚೀನಾವು ಸುಮಾರು 4,000 ಕಿಲೋ ಮೀಟರ್ ಅಂತರದ ಗಡಿಯನ್ನು ಹೊಂದಿದ್ದು, ಇದು ಅತ್ಯಂತ ಸೂಕ್ಷ್ಮ ವಿವಾದವಾಗಿದೆ ಎಂದು ವು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮತ್ತಷ್ಟು
ಪ್ರವಾಹ ಪೀಡಿತ ಮಿಡ್ನಾಪುರಕ್ಕೆ ಸೇನೆ
ಗುಜ್ಜಾರರ ಪ್ರತಿಭಟನೆ ಹಿಂಪಡೆದ ಭೈಂಸ್ಲಾ
ಚೀನ ಅತಿಕ್ರಮಣಕ್ಕೆ ಭಾರತ ತರಾಟೆ
ತಲ್ವಾರ್ ನ್ಯಾಯಾಂಗ ಬಂಧನ ವಿಸ್ತರಣೆ
ಅಣು: ಎಡ ಪಕ್ಷಗಳನ್ನು ಬಿಟ್ಟಾಕಲು ಸಿಂಗ್ ಸಲಹೆ
ಗುಜ್ಜಾರ್ ವಿವಾದ: ಮೀಸಲಾತಿಗೆ ಸರಕಾರ ಒಪ್ಪಿಗೆ