ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೇನಕಲ್ ಯೋಜನಾ ಕಚೇರಿ ಆರಂಭ  Search similar articles
NRB
ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ, ವಿವಾದಾಸ್ಪದ ಹೊಗೇನಕಲ್ ಯೋಜನೆಯನ್ನು ಮತ್ತೆ ಆರಂಭಿಸುವ ಎಲ್ಲಾ ಲಕ್ಷಣಗಳು ಗೋಚರವಾಗಿದ್ದು, ಮಂಗಳವಾರ ಹೊಗೇನಕಲ್ ಯೋಜನಾ ಅನುಷ್ಠಾನ ಕಚೇರಿ ಆರಂಭಿಸಲಾಗಿದೆ.

ಈ ಕಚೇರಿಯನ್ನು ಆರಂಭಿಸಿರುವ ರಾಜ್ಯ ನೀರು ಪೂರೈಕೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸ್ವರಣ್ ಸಿಂಗ್ ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿ ಆರಂಭಿಸಿರುವ 1,330 ಕೋಟಿ ರೂ.ವೆಚ್ಚದ ಹೊಗೇನಕಲ್ ನೀರಾವರಿ ಯೋಜನೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವುದಾಗಿ ಘೋಷಿಸಿದ್ದಾರೆ.

ಕರ್ನಾಟಕದ ಗಡಿಯಲ್ಲಿರುವ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ತಮಿಳ್ನಾಡು ಸರಕಾರ ಹೇಳಿದೆ. ಅಂತಾರಾಷ್ಟ್ರೀಯ ಸಹಕಾರದ ಜಪಾನೀಸ್ ಬ್ಯಾಂಕ್ ಸಹಾಯಧನದೊಂದಿಗೆ ಕೈಗೆತ್ತಿಕೊಳ್ಳಲಾಗಿರುವ ಯೋಜನೆಯು ಎರಡು ಹಂತದಲ್ಲಿ ಪೂರ್ಣಗೊಳ್ಳಲಿದ್ದು, ಹಂತಹಂತವಾಗಿ ಮುಂದುವರಿಯಲಿದೆ ಎಂದು ಸ್ವರಣ್ ತಿಳಿಸಿದ್ದಾರಲ್ಲದೆ, ಯೋಜನೆಯು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 2009ರಲ್ಲಿ ಸರಕಾರವು ಟೆಂಡರ್ ಕಾರ್ಯ ಅಂತಿಮಗೊಳಿಸಿದ ಬಳಿಕ ಯೋಜನೆಯ ಕಾಮಗಾರಿ ಆರಂಭವಾಗಲಿದ್ದು, ನಿಗದಿಯಾಗಿರುವಂತೆ 2012ರಲ್ಲಿ ಪೂರ್ಣಗೊಳ್ಳಲಿದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ತಮಿಳ್ನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಇದೇ ಫೆಬ್ರವರಿ 26ರಂದು ಅಡಿಗಲ್ಲು ಹಾಕಿರುವ ಈ ಯೋಜನೆಯ ಮುಂದುವರಿಕೆಗೆ ಕರ್ನಾಟಕದ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು ಉಗ್ರ ಪ್ರತಿಭಟನೆಗೆ ಮುಂದಾಗಿದ್ದವು.

ಈ ಯೋಜನೆಯ ಕುರಿತು ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ಸಮಾರಂಭವೊಂದರಲ್ಲಿ ನೀಡಿದ್ದ ಪ್ರಚೋದನಾಕಾರಿ ಹೇಳಿಕೆಯಿಂದಾಗಿ ಎರಡೂ ರಾಜ್ಯಗಳಲ್ಲೂ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಬಳಿಕ ಕರ್ನಾಟಕದಲ್ಲಿ ಚುನಾಯಿತ ಸರಕಾರ ಇಲ್ಲ ಎಂಬ ಕಾರಣ ನೀಡಿ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.
ಮತ್ತಷ್ಟು
ಅಣು ಒಪ್ಪಂದ ಇಲ್ಲವೇ ಪದತ್ಯಾಗ: ಪ್ರಧಾನಿ
ಗಡಿ ವಿವಾದವು ಅತ್ಯಂತ ಸೂಕ್ಷ್ಮ ವಿಚಾರ: ಚೀನಾ
ಪ್ರವಾಹ ಪೀಡಿತ ಮಿಡ್ನಾಪುರಕ್ಕೆ ಸೇನೆ
ಗುಜ್ಜಾರರ ಪ್ರತಿಭಟನೆ ಹಿಂಪಡೆದ ಭೈಂಸ್ಲಾ
ಚೀನ ಅತಿಕ್ರಮಣಕ್ಕೆ ಭಾರತ ತರಾಟೆ
ತಲ್ವಾರ್ ನ್ಯಾಯಾಂಗ ಬಂಧನ ವಿಸ್ತರಣೆ