ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ ಅಕ್ರಮದಾಸ್ತಾನುಗಾರರ ವಿರುದ್ಧ ಕ್ರಮಕ್ಕೆ ಸಲಹೆ  Search similar articles
PTI
ರಸಗೊಬ್ಬರದ ಕಾಳಸಂತೆ ಕೋರರು ಮತ್ತು ಅಕ್ರಮ ದಾಸ್ತಾನಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ತಾಕೀತು ಮಾಡಿದೆ. ರಸಗೊಬ್ಬರದ ಅಲಭ್ಯತೆಯಿಂದಾಗಿ ರಾಷ್ಟ್ರದ ಕೆಲವೆಡೆ ಅಶಾಂತಿ ಹುಟ್ಟಿಕೊಂಡಿರುವ ಕಾರಣ ಕೇಂದ್ರ ಈ ಹೇಳಿಕೆ ನೀಡಿದೆ.

ಸಾಕಷ್ಟು ರಸಗೊಬ್ಬರದ ಪೂರೈಕೆ ಮಾಡಲಾಗಿದೆ ಎಂದು ಹೇಳಿರುವ ರಸಗೊಬ್ಬರ ಖಾತೆ ಕಾರ್ಯದರ್ಶಿ ಜೆ.ಎಸ್.ಶರ್ಮಾ, ರೈತರು ಭೀತಿಯ ಖರೀದಿಗೆ ಮುಂದಾಗುವುದು ಬೇಡ ಎಂದು ಹೇಳಿದ್ದಾರೆ.

ಅಕ್ರಮದಾಸ್ತಾನುಗಳನ್ನು ತೆರೆವುಗೊಳಿಸಿ, ಇವುಗಳು ಸಮವಾಗಿ ವಿಸ್ತರಣೆಯಾಗುವಂತೆ ಮಾಡಬೇಕೆಂದು ರಾಜ್ಯಸರಕಾರಗಳನ್ನು ವಿನಂತಿಸಿರುವ ಶರ್ಮಾ, ಅಕ್ರಮ ದಾಸ್ತಾನು ಮತ್ತು ಅಸಮ ರೀತಿಯ ವಿತರಣೆಯು ಕರ್ನಾಟಕ ಸೇರಿದಂತೆ ದೇಶದ ಕೆಲವೆಡೆ ಉಂಟಾಗಿರುವ ಬಿಕ್ಕಟ್ಟಿಗೆ ಕಾರಣ ಎಂದು ಹೇಳಿದ್ದಾರೆ.

ಕರ್ನಾಟಕದ ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಗೋಲಿಬಾರ್ ನಡೆಸಿದ್ದು, ರೈತನೋರ್ವ ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ.
ಮತ್ತಷ್ಟು
ಹೊಗೇನಕಲ್ ಯೋಜನಾ ಕಚೇರಿ ಆರಂಭ
ಅಣು ಒಪ್ಪಂದ ಇಲ್ಲವೇ ಪದತ್ಯಾಗ: ಪ್ರಧಾನಿ
ಗಡಿ ವಿವಾದವು ಅತ್ಯಂತ ಸೂಕ್ಷ್ಮ ವಿಚಾರ: ಚೀನಾ
ಪ್ರವಾಹ ಪೀಡಿತ ಮಿಡ್ನಾಪುರಕ್ಕೆ ಸೇನೆ
ಗುಜ್ಜಾರರ ಪ್ರತಿಭಟನೆ ಹಿಂಪಡೆದ ಭೈಂಸ್ಲಾ
ಚೀನ ಅತಿಕ್ರಮಣಕ್ಕೆ ಭಾರತ ತರಾಟೆ