ಅಹ್ಮದಾಬಾದಿನ ಸೆಷನ್ಸ್ ನ್ಯಾಯಾಲಯವೊಂದು ಶುಕ್ರವಾರ ಬಿಜಲ್ ಜೋಷಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಐದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇತರ ಏಳು ಮಂದಿಯನ್ನು ಸಾಕ್ಷಾಧಾರಗಳ ಕೊರತೆಯಿಂದ ನಿರ್ದೋಷಿಗಳೆಂದು ತೀರ್ಮಾನ ಮಾಡಿದೆ.
ಶಿಕ್ಷೆಗೀಡಾಗಿರುವ ಸಾಜಾಲ್ ಜೈನ್, ಸುಗಮ್ ಜೈಸ್ವಾಲ್, ಅಶೋಕ್ ಜೈಸ್ವಾಲ್ ಮತ್ತು ಕರಣ್ ಜೈನ್ ಅವರುಗಳಿಗೆ ತಲಾ 15 ಸಾವಿರ ರೂಪಾಯಿ ದಂಡನ್ನೂ ವಿಧಿಸಿದೆ.
ದೆಹಲಿ ಮೂಲದ ಉದ್ಯಮಿಯಾಗಿರುವ ಸಾಜಲ್ ಜೈನ್ ಮತ್ತು ಆತನ ಸ್ನೇಹಿತರು 2004ರ ಜನವರಿ ಒಂದರಂದು ಅಹ್ಮದಾಬಾದಿನ ಶಾಹಿಬಾಗ್ ಪ್ರದೇಶದ ಹೊಟೇಲೊಂದರಲ್ಲಿ 24ರ ಹರೆಯದ ಬಿಜಾಲ್ ಮೇಲೆ ಈ ಅನಾಚಾರ ಎಸಗಿದ್ದರು. ಬಳಿಕ ಜನವರಿ 7ರಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೊಲೀಸರು ಆರೋಪಿಗಳ ಪರವಾಗಿದ್ದಾರೆ ಎಂದು ಭಾವಿಸಿದ್ದ ಆಕೆ ಆತ್ಮಹತ್ಯೆಗೆ ಮುಂದಾಗಿದ್ದಳು. ಬಿಜಲ್‌ಗೆ ಆಗಿರುವ ಅನ್ಯಾಯದ ವಿರುದ್ಧ ಆಕೆಯ ಸಹೋದರಿ ಹೋರಾಟ ನಡೆಸಿದ್ದರು.
ಪ್ರಕರಣದ ಬಳಿಕ ದೆಹಲಿ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಸಾಜಲ್, ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ವಿಷಾಹಾರವಾಗಿರುವ ನಟನೆ ಮಾಡಿದ್ದ. ಅಂದಿನಿಂದ ಆತ ಪೊಲೀಸರ ವಶದಲ್ಲಿದ್ದಾನೆ.
|