ದೇಶದ ಹಣದುಬ್ಬರ ದರವು 13 ವರ್ಷಗಳಲ್ಲೇ ಅತ್ಯಧಿಕ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ಬೆಲೆ ಏರಿಕೆಯ ವಿರುದ್ಧ ತಮ್ಮ ಪ್ರತಿಭಟನೆಗಳನ್ನು ತೀವ್ರಗೊಳಿಸುವುದಾಗಿ ಸಿಪಿಎಂ ಶುಕ್ರವಾರ ಘೋಷಿಸಿದೆ.
ಇದು ಜನರ ಜೀವನ ಪದ್ಧತಿಯ ಮೇಲೆ ದಯನೀಯ ಪರಿಣಾಮ ಬೀರಲಿದೆ ಎಂದು ಸಿಪಿಎಂ ಹೇಳಿಕೆಯೊಂದರಲ್ಲಿ ತಿಳಿಸಿದ್ದು, ಬೆಲೆ ಏರಿಕೆ ವಿರುದ್ಧದ ಚಳವಳಿ ತೀವ್ರಗೊಳಿಸುವಂತೆ ಪಕ್ಷದ ಎಲ್ಲಾ ಘಟಕಗಳಿಗೂ ಕರೆ ನೀಡಿದೆ.
ಏರುತ್ತಿರುವ ಬೆಲೆಗಳು ದೇಶದ ಸಮ್ಮಿಶ್ರ ಸರಕಾರಕ್ಕೆ ತೀವ್ರ ತಲೆನೋವಾಗಿದ್ದು, ವರ್ಷದೊಳಗೆ ಚುನಾವಣೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಏನಾದರೂ ಮಾಡದಿದ್ದರೆ ಚುನಾವಣೆ ಎದುರಿಸುವುದೂ ಕಷ್ಟ ಎಂಬುದು ಎಡಪಕ್ಷಗಳು ಹಾಗೂ ಸರಕಾರದ ಅಂಗ ಪಕ್ಷಗಳಿಗೆ ಅರಿವಿದೆ.
|