ಪ್ರತಿಕೂಲ ಹವಾಮಾನದಿಂದಾಗಿ ಸ್ವಲ್ಪ ಸಮಯದವರೆಗೆ ತಡೆಹಿಡಿಯಲ್ಪಟ್ಟಿದ್ದ ಅಮರನಾಥ ಯಾತ್ರೆಯು, ಒಂದು ದಿನದ ಬಳಿಕ ಆರಂಭಗೊಂಡಿದ್ದು, 214 ಸಾಧುಗಳನ್ನು ಒಳಗೊಂಡಿರುವ 3,692 ಜನರ ಹೊಸ ತಂಡ, ಭಗವತಿ ನಗರದಿಂದ 95 ವಾಹನಗಳಲ್ಲಿ ಶನಿವಾರ ಮುಂಜಾನೆ ಹೊರಟಿತು.
ಈ ಯಾತ್ರಾ ತಂಡವು ಜಮ್ಮು-ಶ್ರಿನಗರದ ಕುಡ್ ಪ್ರದೇಶವನ್ನು ಹಾದಿದ್ದು, ಈ ಸಂಜೆ ಪಹಲ್ಗಮ್‌ನ ನುನ್‌ವಾನ್ ಮತ್ತು ಬಲ್ಟಲ್ ಜಿಲ್ಲೆಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರತಿಕೂಲ ಹವಾಮಾನ ಮತ್ತು ಭಾರಿ ಮಳೆಯಿಂದಾಗಿ ನಿನ್ನೆ ಯಾತ್ರೆಯನ್ನು ಸ್ಥಗಿತಗೊಳಿಸಿದ್ದು, ಯಾತ್ರಾರ್ಥಿಗಳನ್ನು ಕಾಶ್ಮೀರದ ಕಡೆಗೆ ಮುಂದುವರೆಯದಂತೆ ತಡೆಹಿಡಿಯಲಾಗಿತ್ತು.
ಇಂದಿನ ತಂಡವು ಸೇರಿದಂತೆ, 11,943 ಯಾತ್ರಾರ್ಥಿಗಳು ಜಮ್ಮುವಿನಿಂದ ಅಮರನಾಥ್ ಮಂದಿರಕ್ಕೆ ಯಾತ್ರೆ ತೆರಳಿದ್ದಾರೆ.
ಎರಡು ತಿಂಗಳ ಅವಧಿಯ ಯಾತ್ರೆಯು, ಜೂನ್ 17ರಂದು ಆರಂಭಗೊಂಡಿದ್ದು, ಆಗಸ್ಟ್ 16ರಂದು ಮುಕ್ತಾಯಗೊಳ್ಳುತ್ತದೆ.
|