ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವು, ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ)ಕ್ಕೆ ನೀಡಿದ ಬೆಂಬಲವನ್ನು ಶನಿವಾರ ಹಿಂತೆಗೆದುಕೊಂಡಿದೆ.
ಯುಪಿಎಯಿಂದ ಹಿಂದೆ ಸರಿಯುವುದಾಗಿ ರಾಷ್ಟ್ರಪತಿಯವರಿಗೆ ಬಿಎಸ್ಪಿ ಪತ್ರ ಬರೆದಿದೆ ಎಂದು ಪಕ್ಷದ ವರಿಷ್ಠೆ ಮಾಯಾವತಿ ಅವರು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ನಾಗಾಲೋಟದ ಹಣದುಬ್ಬರಕ್ಕೆ ಕಡಿವಾಣ ಹಾಕುವಲ್ಲಿ ಯುಪಿಎ ಸರಕಾರ ವಿಫಲತೆಯು ಬೆಂಬಲ ಹಿಂತೆಗೆಯಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದರು.
ಲೋಕ ಸಭೆಯಲ್ಲಿ ಬಿಎಸ್ಪಿಯು ತನ್ನ 17 ಮಂದಿ ಸಂಸದರನ್ನು ಹೊಂದಿದೆ.
|