ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೂರ್ಖಾಲ್ಯಾಂಡ್: ಕೇಂದ್ರ ನೇರಪ್ರವೇಶ ಇಲ್ಲ - ಮುನ್ಷಿ  Search similar articles
ಕೂಚ್ ಬಿಹಾರ್: ಕೇಂದ್ರ ಸರಕಾರವು ಗೂರ್ಖಾಲ್ಯಾಂಡ್ ವಿವಾದದಲ್ಲಿ ನೇರವಾಗಿ ಮಧ್ಯಪ್ರವೇಶ ಮಾಡುವುದಿಲ್ಲ, ಆದರೆ ಪಶ್ಚಿಮಬಂಗಾಳದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಅಗತ್ಯ ಇರುವ ಎಲ್ಲಾ ಸಹಾಯವನ್ನು ನೀಡಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್‌ಮುನ್ಷಿ ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಬಾಧ್ಯತೆಗಳಿರುವ ಕಾರಣ ಕೇಂದ್ರವು ಈ ವಿಚಾರದಲ್ಲಿ ನೇರವಾಗಿ ಮಧ್ಯೆ ಪ್ರವೇಶಿಸಲು ಒಲವು ಹೊಂದಿಲ್ಲ, ಆದರೆ ಜಿಜೆಎಂ ಚಳುವಳಿಯಿಂದ ಉದ್ಭವಿಸಿರುವ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರಕಾರಕ್ಕೆ ಎಲ್ಲಾ ಸಹಾಯವನ್ನು ನೀಡಲಿದೆ ಎಂದು ದಾಸ್‌ಮುನ್ಷಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರು ಮೇಖಲಿಗಂಜ್‌ನಲ್ಲಿ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಿಪಿಐ-ಎಂನೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದರೂ, ರಾಜ್ಯದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅದು ಅಡ್ಡಬರದು ಎಂದು ಹೇಳಿದ್ದಾರೆ. ಬಂಗಾಳದ ಇನ್ನಷ್ಟು ವಿಭಜನೆಗೆ ಕಾಂಗ್ರೆಸ್ ಒಲವು ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೇಖಲಿಗಂಜ್‌ ಪುರಸಭಾ ಚುನಾವಣಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ದಾಸ್‌ಮುನ್ಷಿ ಇಲ್ಲಿಗೆ ಆಗಮಿಸಿದ್ದರು.

ಮೇಖಲಿಗಂಜ್‌ ಸೇರಿದಂತೆ ವಿವಿಧ ನಗರಸಭೆಗಳಿಗೆ ಒದಗಿಸಲಾಗಿರುವ ಅಭಿವೃದ್ಧಿ ನಿಧಿಗಳನ್ನು ಬಳಸಿಕೊಳ್ಳಲು ಎಡರಂಗ ಸರಕಾರವು ವಿಫಲವಾಗಿದೆ ಎಂದು ಸಚಿವರು ದೂರಿದರು.
ಮತ್ತಷ್ಟು
ಇರಾನ್ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ: ದೇವುರಾ
ತೈಲಬೆಲೆ ವಿನಾಶಕ್ಕೆ ಹಾದಿ: ಭಾರತದ ಎಚ್ಚರಿಕೆ
ಯುಪಿಎ-ಎಡಪಕ್ಷ ಸಂಧಾನಕ್ಕೆ ಕರುಣಾನಿಧಿ
ಯುಪಿಎ ಬೆಂಬಲ ವಾಪಾಸ್ ಪಡೆದ ಮಾಯಾವತಿ
ಅಮರನಾಥ ಯಾತ್ರೆ ಮುಂದುವರಿಕೆ
ಪ್ರಧಾನಿ ಅಸೌಖ್ಯ: ಪ್ರಣಬ್ ಆಸ್ಟ್ರೇಲಿಯಾ ಭೇಟಿ ಮುಂದಕ್ಕೆ