ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ ಪರಿಹಾರಕ್ಕೆ ಕರಣಾಗೆ ವಾಮರ ಮನವಿ  Search similar articles
PTI
ಭಾರತ-ಅಮೆರಿಕ ಅಣುಒಪ್ಪಂದವು ಭಾರತದಲ್ಲಿ ಕಾವೇರಿಸುತ್ತಿದ್ದು, ಸಂಯುಕ್ತ ಪ್ರಗತಿಪರ ಮೈತ್ರಿಕೂಟ(ಯುಪಿಎ) ಮತ್ತು ಎಡಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಗಳು ಮುಂದುವರಿದಿವೆ.

ಏತನ್ಮಧ್ಯೆ, ಎಡಪಕ್ಷಗಳು ಮತ್ತು ಯುಪಿಎ ನಡುವೆ ಸಂಧಾನಕಾರರಾಗಿ ಮೂಡಿ ಬಂದಿರುವ ತಮಿಳ್ನಾಡು ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕರುಣಾನಿಧಿ ಅವರನ್ನು ಎಡಪಕ್ಷಗಳು ರಾಜೀಸೂತ್ರ ಒಂದಕ್ಕೆ ಬರುವಂತೆ ಸಹಾಯ ಮಾಡಲು ಕೋರಿವೆ.

ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಮತ್ತು ಸಿಪಿಐ ನಾಯಕ ಡಿ ರಾಜಾ ಅವರುಗಳು ಭಾನುವಾರ ಕರುಣಾನಿಧಿಯವರನ್ನು ಚೆನ್ನೈನಲ್ಲಿ ಭೇಟಿ ಮಾಡಿದ್ದು, ಅಣು ಒಪ್ಪಂದದ ತೊಡಕುಗಳ ಕುರಿತು ಚರ್ಚಿಸಿದರು.

ಅಣು ಒಪ್ಪಂದವೂ ಬೇಕು ಮತ್ತು ಎಡಪಕ್ಷಗಳ ಬೆಂಬಲವೂ ಬೇಕು ಎಂಬ ನಿಲುವು ಹೊಂದಿರುವ ಡಿಎಂಕೆಯು ತಾಳ್ಮೆಯಿಂದಿರುವಂತೆ ಎಡಪಕ್ಷಗಳನ್ನು ಕೋರಿದೆ.

ಅಂತೆಯೆ, ಈ ವಿವಾದದ ಕುರಿತು ಸೂಕ್ತ ನಿರ್ಧಾರವನ್ನು ಕೈಗೊಂಡು ಸಹಾಯ ಮಾಡುವಂತೆ ಎಡಪಕ್ಷಗಳು ಕರುಣಾನಿಧಿಯವರನ್ನು ವಿನಂತಿಸಿರುವುದಾಗಿ ಕಾರಟ್ ಹೇಳಿದ್ದಾರೆ.

ಐಎಇಎಯೊಂದಿಗೆ ಸುರಕ್ಷತಾ ಒಪ್ಪಂದದಲ್ಲಿ ಯುಪಿಎ ಮುಂದುವರಿಯುವ ಕುರಿತು ಎಡಪಕ್ಷಗಳ ಅಭಿಪ್ರಾಯವನ್ನೂ ಮಾತುಕತೆಯ ವೇಳೆಗೆ ಪ್ರಸ್ತಾಪಿಸಿರುವುದಾಗಿ ಕಾರಟ್ ತಿಳಿಸಿದ್ದಾರೆ.
ಮತ್ತಷ್ಟು
ಗೂರ್ಖಾಲ್ಯಾಂಡ್: ಕೇಂದ್ರ ನೇರಪ್ರವೇಶ ಇಲ್ಲ - ಮುನ್ಷಿ
ಇರಾನ್ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ: ದೇವುರಾ
ತೈಲಬೆಲೆ ವಿನಾಶಕ್ಕೆ ಹಾದಿ: ಭಾರತದ ಎಚ್ಚರಿಕೆ
ಯುಪಿಎ-ಎಡಪಕ್ಷ ಸಂಧಾನಕ್ಕೆ ಕರುಣಾನಿಧಿ
ಯುಪಿಎ ಬೆಂಬಲ ವಾಪಾಸ್ ಪಡೆದ ಮಾಯಾವತಿ
ಅಮರನಾಥ ಯಾತ್ರೆ ಮುಂದುವರಿಕೆ