ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಳೆ ಬುದ್ದದೇವ್ ಜಿಜೆಎಮ್ ಭೇಟಿ  Search similar articles
ಪಶ್ಚಿಮ ಬಂಗಳಾದ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಜಿ ಅವರೊಂದಿಗೆ ಪ್ರಸ್ತುತ ಪರಿಸ್ಥಿತಿಗಳ ಕುರಿತು ಚರ್ಚಿಸಲು ಸಹಾಯಕ ಪ್ರಧಾನ ಕಾರ್ಯದರ್ಶಿ ರಾಜು ಪ್ರಧಾನ್ ಅವರ ನೇತೃತ್ವದ ಗೂರ್ಖ ಜನಮುಕ್ತಿ ಮೊರ್ಚ ನಿಯೋಗವು ಮಂಗಳವಾರ ಕೊಲ್ಕತಾಗೆ ತೆರಳಲಿದೆ. ಏತನ್ಮಧ್ಯೆ, 60 ಗಂಟೆಗಳ ಬಂದ್ ಸಡಿಲಿಕೆ ಚಾಲ್ತಿಯಲ್ಲಿದೆ.

ನಿಯೋಗವು ಮುಖ್ಯಮಂತ್ರಿಗಳಲ್ಲಿ ತೇರಾಯಿ ಮತ್ತು ದೊಅರ‌್‌ಸ್ ಪ್ರದೇಶಗಳಲ್ಲಿ ಯಾವುದೆ ಹೊಸ ಹಿಂಸಾ ಘಟನೆಗಳು ವರದಿಯಾಗಿಲ್ಲದೆ ಇರುವುದರಿಂದ, ಇಲ್ಲಿ ಗಸ್ತು ತಿರುಗುತ್ತಿರುವ ಸಿಅರ್‌ಪಿಎಫ್ ಪಡೆಗಳನ್ನು ಹಿಂಪಡೆದುಕೊಳ್ಳುವಂತೆ ಕೋರಿಕೆ ಸಲ್ಲಿಸುವುದಾಗಿ ಜಿಜೆಎಮ್‌ ನ ಪ್ರಚಾರ ಕಾರ್ಯದರ್ಶಿ ಭನಾಯ್ ತಮಂಗ್ ತಿಳಿಸಿದರು.

"ಸೆಕ್ಷನ್ 144ನ್ನು ಯಾಕೆ ಹೇರಲಾಗಿದೆ ಮತ್ತು ನಮ್ಮ ಬೆಂಬಲಿಗರಿಗೆ ಉಪವಾಸ ಸತ್ಯಾಗ್ರಹ ಹಾಗು ಇತರ ಶಾಂತಿಯುತ ಪ್ರಜಾತಾಂತ್ರಿಕ ಚಳುವಳಿಗಳನ್ನು ನಡೆಸಲು ಯಾಕೆ ಅನುವು ಮಾಡಿ ಕೊಡಲಾಗುತ್ತಿಲ್ಲ ಎಂದು ಕೂಡ ಜಿಜೆಎಮ್ ಮುಖ್ಯಮಂತ್ರಿಗಳನ್ನು ಪ್ರಶ್ನಿಸಲಿದೆ" ಎಂದು ಮಿ.ತಮಂಗ್ ತಿಳಿಸಿದರು.

ಜಿಜೆಎಮ್ ಬೆಂಬಲಿಗರ ಮೇಲೆ ಜನ ಜಾಗ್ರನ್ ಮತ್ತು ಅಮ್ರ ಬೆಂಗಾಲಿ ಕಾರ್ಯಕರ್ತರಿಂದ ನಡೆಸಲಾಗಿದೆ ಎನ್ನಲಾದ ಹಲ್ಲೆಗಳು ಹಾಗೂ ದೌರ್ಜನ್ಯಗಳ ಕುರಿತು ಸಹ ಚರ್ಚಿಸಲಾಗುವುದು ಎಂದೂ ಅವರು ನುಡಿದರು.

ಈ ಮೊದಲು ಮುಖ್ಯಮಂತ್ರಿಗಳ ಮಾತುಕತೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದ ಜಿಜೆಎಮ್ ತನ್ನಗೆ ಆದ "ಶಾಂತಿ ನಿರ್ವಹಣಾ ಪಡೆ"ಯನ್ನು ಬೆಟ್ಟಗಳಲ್ಲಿ ನಿರ್ಮಿಸುವ ನಿರ್ಣಯವನ್ನು ಕೈಗೊಂಡಿತ್ತು. "ನಾವು ಈಗಾಗಲೆ ಮುಖ್ಯಮಂತ್ರಿಗಳ ಹೊಸ ಪ್ರಸ್ತಾವನೆಯನ್ನು ಅರಿತಿದ್ದೇವೆ. ಆದರೆ ಡಾರ್ಜಿಲಿಂಗ್ ವಿವಾದಕ್ಕೆ ಕುರಿತಾಗಿ ಯಾವುದೆ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ" ಎಂದು ತಮಂಗ್ ಹೇಳಿದ್ದರು.

ಮತ್ತಷ್ಟು
ಸಿಖ್ ಬಾಲಕನಿಗೆ ಗುಂಡು: 11 ಬಂಧನ
ಅಣು ಒಪ್ಪಂದ ಪರಿಹಾರಕ್ಕೆ ಕರಣಾಗೆ ವಾಮರ ಮನವಿ
ಗೂರ್ಖಾಲ್ಯಾಂಡ್: ಕೇಂದ್ರ ನೇರಪ್ರವೇಶ ಇಲ್ಲ - ಮುನ್ಷಿ
ಇರಾನ್ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ: ದೇವುರಾ
ತೈಲಬೆಲೆ ವಿನಾಶಕ್ಕೆ ಹಾದಿ: ಭಾರತದ ಎಚ್ಚರಿಕೆ
ಯುಪಿಎ-ಎಡಪಕ್ಷ ಸಂಧಾನಕ್ಕೆ ಕರುಣಾನಿಧಿ