ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ: ಮಿತ್ರ ಪಕ್ಷಗಳ ಭೇಟಿ  Search similar articles
ಭಾರತ ಅಮೆರಿಕ ಪರಮಾಣು ಒಪ್ಪಂದದ ಕುರಿತಾಗಿ ದೃಢ ನಿಲುವನ್ನು ಹೊಂದಿರುವ ಎಡಪಕ್ಷಗಳನ್ನು ಓಲೈಸಲು ವಿಫಲವಾಗಿರುವ ಕಾಂಗ್ರೆಸ್ ಪಕ್ಷವು, ಈ ಕುರಿತಾಗಿ ಬೆಂಬಲ ನೀಡುವಂತೆ ಕೋರಿ ಇತರ ಯುಪಿಎ ಮಿತ್ರ ಪಕ್ಷಗಳನ್ನು ಸೋಮವಾರ ಭೇಟಿ ಮಾಡಿದೆ.

ಯುಪಿಎ ಮೈತ್ರಿ ಪಕ್ಷಗಳಾದ ಆರ್‌ಜೆಡಿ, ಎಲ್‌ಜೆಪಿ, ಎನ್‌ಸಿಪಿ ಅಣು ಒಪ್ಪಂದಕ್ಕೆ ಬೆಂಬಲ ನೀಡಿದರೂ, ಈಗಾಗಲೇ ಹಣದುಬ್ಬರ ಮತ್ತು ಬೆಲೆ ಏರಿಕೆ ಸಮಸ್ಯೆಯಿಂದ ತತ್ತರಿಸಿರುವ ಯುಪಿಎ ಸರಕಾರಕ್ಕೆ ಮತ್ತೊಂದು ಅಪಾಯವನ್ನು ತಂದೊಡ್ಡಲು ಇಷ್ಟವಿಲ್ಲ ಎಂದು ಹೇಳುವ ಮೂಲಕ ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಒಪ್ಪಂದ ಅನುಷ್ಠಾನದ ಆಸೆಯನ್ನು ಭಗ್ನಗೊಳಿಸಿದೆ.

ಪರಮಾಣು ಒಪ್ಪಂದವು ಅತ್ಯಂತ ಮುಖ್ಯವಾದುದು ಎಂದು ತಿಳಿದಿದ್ದರೂ ಕೂಡಾ ಎಡ ಪಕ್ಷಗಳ ಅಸಮಧಾನದೊಂದಿಗೆ ಒಪ್ಪಂದವನ್ನು ಮುಂದುವರಿಸುವುದು ಮೂರ್ಖತನವಾಗಿದೆ ಮತ್ತು ಅಪಾಯಕಾರಿಯೂ ಆಗಿದೆ ಎಂದು ಮೈತ್ರಿ ಪಕ್ಷಗಳು ಅಭಿಪ್ರಾಯಪಟ್ಟಿದ್ದು, ಸದ್ಯಕ್ಕೆ ಈ ಒಪ್ಪಂದದಿಂದ ಹಿಂದೆ ಸರಿದು ಸಂದರ್ಭ ಬಂದಾಗ ಇದರಲ್ಲಿ ಮುಂದುವರಿಯುವಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಸಲಹೆ ನೀಡಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಎಲ್‌ಜೆಪಿ ನಾಯಕ ರಾಂ ವಿಲಾಸ್ ಪಾಸ್ವಾನ್ ಅವರನ್ನು ಸೋನಿಯಾ ಗಾಂಧಿ ಅವರು ಸೋಮವಾರ ನವದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.

ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ, ನಾಯಕ ಶರದ್ ಪವಾರ್ ಅವರು ಒಪ್ಪಂದದ ವಿಚಾರವಾಗಿ ಮಾತುಕತೆ ನಡೆಸಲು ಸಿಪಿಐ(ಎಂ) ನಾಯಕ ಪ್ರಕಾಶ್ ಕಾರಟ್ ಅವರನ್ನು ಭೇಟಿ ಮಾಡಿದ್ದಾರೆ.

ಈ ಒಪ್ಪಂದವು ದೇಶದ ಹಿತಾಸಕ್ತಿಯಿಂದ ನಡೆಸಲಾಗುತ್ತಿದೆ. ಅಲ್ಲದೆ, ಎಡಪಕ್ಷಗಳ ಬೆಂಬಲದೊಂದಿಗೆ ಯುಪಿಎ ಸರಕಾರವು ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ. ಎಡಪಕ್ಷಗಳು ರಾಷ್ಟ್ರ ವಿರೋಧಿಗಳಲ್ಲಿ ಅವರಿಗೂ ತಮ್ಮದೇ ಆದ ಭಿನ್ನ ನಿಲುವುಗಳಿರುತ್ತವೆ ಎಂದು ಈ ಸಭೆಯ ವೇಳೆ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಮತ್ತಷ್ಟು
ಸಹರಾ: ಯಥಾಸ್ಥಿತಿ ಕಾಯ್ದುಕೊಳ್ಳಲು ಸು.ಕೋ ಆದೇಶ
ಕಾಡಾನೆ ದಾಳಿಗೆ ಅರಣ್ಯ ರಕ್ಷಕ ಬಲಿ
ನಾಳೆ ಬುದ್ದದೇವ್ ಜಿಜೆಎಮ್ ಭೇಟಿ
ಸಿಖ್ ಬಾಲಕನಿಗೆ ಗುಂಡು: 11 ಬಂಧನ
ಅಣು ಒಪ್ಪಂದ ಪರಿಹಾರಕ್ಕೆ ಕರಣಾಗೆ ವಾಮರ ಮನವಿ
ಗೂರ್ಖಾಲ್ಯಾಂಡ್: ಕೇಂದ್ರ ನೇರಪ್ರವೇಶ ಇಲ್ಲ - ಮುನ್ಷಿ