ಹುರಿಯತ್ ಕಾನ್ಫರೆನ್ಸ್(ಎಚ್‌ಸಿ) ಅಧ್ಯಕ್ಷ ಸಯ್ಯದ್ ಶಾ ಗಿಲಾನಿ ಅವರನ್ನು ಮಂಗಳವಾರ ಗೃಹಬಂಧನದಲ್ಲಿರಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಮುಂದಿನ ಆದೇಶಗಳ ತನಕ ಗಿಲಾನಿ ತನ್ನ ನಿವಾಸದಿಂದ ಹೊರಗೆ ಕಾಲಿರಿಸಬಾರದು ಎಂಬುದಾಗಿ ಅವರಿಗೆ ಹೇಳಿರುವುದಾಗಿ ಹುರಿಯತ್‌ನ ವಕ್ತಾರ ಅಯಾಜ್ ಅಕ್ಬರ್ ಹೇಳಿದ್ದಾರೆ.
ಗಿಲಾನಿ ನಿವಾಸದ ಹೊರಗಡೆ ದೊಡ್ಡ ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಗೃಹಬಂಧನಕ್ಕೀಡಾಗಿರುವುದಾಗಿ ಗಿಲಾನಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
|