ಪ್ರವಾಹದಿಂದ ಉಕ್ಕಿಹರಿಯುತ್ತಿದ್ದ ಪ್ರಮುಖ ನದಿಗಳ ಅಬ್ಬರ ಇಳಿಕೆಯಾಗುತ್ತಿದ್ದು, ಅಸ್ಸಾಂ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳಗಳಲ್ಲಿನ ಪರಿಸ್ಥಿತಿಯಲ್ಲಿ ಒಂದಿಷ್ಟು ಸುಧಾರಣೆಯಾಗಿದೆ. ಆದರೆ, ರಸ್ತೆ ಮತ್ತು ರೈಲು ಸೇವೆಗಳು ಇನ್ನಷ್ಟೆ ಪೂರ್ಣವಾಗಿ ಸುಸ್ಥಿತಿಗೆ ಹಿಂದಿರುಗಬೇಕಾಗಿದೆ.
ಪ್ರವಾಹದಿಂದಾಗಿ ಸುಮಾರು 900 ಗ್ರಾಮಗಳು ತೊಂದರೆಗೀಡಾಗಿದ್ದು, ಹನ್ನೊಂದುವರೆ ಲಕ್ಷ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಸುಮಾರು 50ಕ್ಕಿಂತಲೂ ಅಧಿಕ ಮಂದಿ ವಿವಿಧ ಪ್ರದೇಶಗಳಲ್ಲಿ ಸಾವನ್ನಪ್ಪಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯುದ್ಧೋಪಾದಿಯಲ್ಲಿ ಪರಿಹಾರಕಾರ್ಯ ನಡೆಯುತ್ತಿದೆ. ಅಗತ್ಯ ಔಷಧಗಳೊಂದಿಗೆ ಸುಮಾರು 50 ವೈದ್ಯಕೀಯ ತಂಡಗಳು, ಜಲಶುದ್ಧೀಕರಣ ತಂಡ, ಮತ್ತು ಸೊಂಕು ತಡೆಗಾಗಿ ಬಾಲಸೂರು, ಮಯೂರ್ ಬಂಜ್, ಬಡ್ರಾಕ್, ಜೈಪುರ ಮತ್ತು ಕೇಂದ್ರಪಾರ ಜಿಲ್ಲೆಗಳಲ್ಲಿ ಕಾರ್ಯಚರಿಸಲಾಗುತ್ತಿದೆ.
ನೀರಿನಿಂದ ಹರಡುವ ರೋಗಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾಲಸೂರು ಜಿಲ್ಲೆಯಲ್ಲಿ ಬೇಧಿ ಮತ್ತು ಜ್ವರದ ಲಕ್ಷಣಗಳುಳ್ಳ ರೋಗಿಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲ್ವೇ ಹಳಿಗಳು ಮತ್ತು ರಸ್ತೆಗಳಿಗೆ ನೀರು ನುಗ್ಗಿದ ಕಾರಣ ಹಲವಾರು ರೈಲುಗಳು ರದ್ದಾಗಿದೆ ಇಲ್ಲವೇ ಬೇರೆ ದಾರಿಗಳು ಮೂಲಕ ಹಾದು ಹೋಗುತ್ತಿವೆ.
|