ರಾಜ್ಯಸಭಾ ಸದಸ್ಯತ್ವಕ್ಕೆ ನಾಮಪತ್ರ ಸಲ್ಲಿಸುವ ವೇಳೆ ತನ್ನ ಆಸ್ತಿಯ ಸಂಪೂರ್ಣ ವಿವಿರ ನೀಡದ ಕಾರಣ, ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾಬಚ್ಚನ್ ಅವರಿಗೆ ಚುನಾವಣಾ ಆಯೋಗ ನೋಟೀಸು ನೀಡಿದೆ.
2006ರಲ್ಲಿ ಉಪ ಚುನಾವಣೆ ವೇಳೆ ವಿವರಗಳನ್ನು ನೀಡದಿರುವುದು ಜನಪ್ರತಿನಿಧಿ ಕಾಯ್ದೆಯ ದುರ್ಬಳಕೆಯಾಗಿದೆ ಎಂದು ನೋಟೀಸಿನಲ್ಲಿ ಹೇಳಲಾಗಿದೆ.
ಈ ಕುರಿತಾಗಿ ಪ್ರಥಮ ಮಾಹಿತಿ ವರದಿ ದಾಖಲಿಸಿಕೊಳ್ಳುವಂತೆ ಉತ್ತರ ಪ್ರದೇಶ ಚುನಾವಣಾ ಆಯೋಗವು ಲಕ್ನೋ ಪೊಲೀಸರಿಗೆ ಸೂಚಿಸಿದ್ದು, ಇದರನ್ವಯ ಜನಪ್ರತಿನಿಧಿ ಕಾಯ್ದೆಯ ಉಲ್ಲಂಘನೆಗಾಗಿ ಜಯಾ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಾರಾಬಂಕಿಯಲ್ಲಿ ತನ್ನ ಪತಿ ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವ ಜಮೀನನ್ನು ಅವರು ಪ್ರಮಾಣಪತ್ರ ಸಲ್ಲಿಸುವಾಗ ನಮೂದಿಸಿಲ್ಲದ ಕಾರಣ, ವಾಸ್ತವಾಂಶಗಳನ್ನು ಅಡಗಿಸಿರುವ ಆಪಾದನೆಯನ್ವಯ ಲಕ್ನೋ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಪ್ರಕರಣ ದಾಖಲಿಸಿಕೊಳ್ಳಲು ಉತ್ತರ ಪ್ರದೇಶ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಆರ್.ಪಿ.ಪಾಂಡೆ ಹೇಳಿದ್ದಾರೆ. ಪಾಂಡೆ ಅವರು ಉಪಚುನಾವಣೆಯ ಚುನಾವಣಾಧಿಕಾರಿಯಾಗಿದ್ದರು.
|