ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಜೆಎಮ್ ಬಂದ್ ಮುಂದೂಡಿಕೆ  Search similar articles
ಡಾರ್ಜಿಲಿಂಗ್ ವಿವಾದಕ್ಕೆ ತೆರೆ ಎಳೆಯಲು ದೆಹಲಿಯಲ್ಲಿರುವ ಗೂರ್ಖ ಜನಮುಕ್ತಿ ಮೊರ್ಚ(ಜಿಡೆಎಮ್)ದ ಜನರಲ್ ಸೆಕ್ರೆಟರಿ ರೋಶನ್ ಗಿರಿ ನೇತೃತ್ವದ 4 ಜನರ ನಿಯೋಗವು ಮಂಗಳವಾರದಂದು ಗೃಹ ಸಚಿವ ಶಿವರಾಜ್ ಪಾಟೀಲ್ ಹಾಗೂ ರಕ್ಷಣಾ ಕಾರ್ಯದರ್ಶಿಯವರನ್ನು ಭೇಟಿಯಾಗಲಿದೆ. ಇದಲ್ಲದೆ, ಜಂತರ್ ಮಂತರ್ ಬಳಿ ರ‌್ಯಾಲಿಯನ್ನು ನಡೆಸಲೂ ಉದ್ದೇಶಿಸಿದೆ.

ಈ ಮಧ್ಯೆ, ಜಿಜೆಎಮ್ ಇಂದು ಸಂಜೆ ಚಾಲನೆಗೆ ಬರಬೇಕಾಗಿದ್ದ ಅನಿರ್ದಿಷ್ಟ ಅವಧಿಯ ಬಂದ್ ಅನ್ನು ಜುಲೈ5ರ ವರೆಗೆ ಮುಂದೂಡಿದೆ. ಜನತೆಯ ಅನುಕೂಲಕ್ಕಾಗಿ ಈ ಸಡಿಲಿಕೆ ಮಾಡಿರುವುದಾಗಿ ಜಿಜೆಎಂ ಹೇಳಿದೆ. ಬುಧವಾರ ಸಂಜೆ ಬಂದ್ ಸಡಿಲಿಕೆ ಕೊನೆಗೊಳ್ಳಲಿದೆ ಎಂದು ಸ್ಥಳೀಯರು ಅಗತ್ಯ ಸಾಮಾಗ್ರಿಗಳನ್ನು ಅವಸರವಾಗಿ ಸಂಗ್ರಹಿಸುತ್ತಿರುವಂತೆಯೆ ಈ ಪ್ರಕಟನೆ ಹೊರಬಿದ್ದಿದೆ.

"ತಮ್ಮ ಹೊಸ ದೆಹಲಿ ಭೇಟಿಯ ಉದ್ದೇಶವು ಹೊಸ ಗೂರ್ಖಲ್ಯಾಂಡ್ ರಾಜ್ಯಕ್ಕಾಗಿ ತಮ್ಮ ಬೇಡಿಕೆಯ ಹಿಂದಿನ ತಾರ್ಕಿಕತೆಯನ್ನು ಸರಕಾರಕ್ಕೆ ಮನಗಾಣಿಸುವುದಾಗಿದೆ" ಎಂದು ಇತರ ಮಾಹಿತಿಗಳನ್ನು ಬಹಿರಂಗ ಪಡಿಸುತ್ತ, ರೋಶನ್ ಗಿರಿ ತಿಳಿಸಿದರು.

ಏತನ್ಮಧ್ಯೆ, ಕೇಂದ್ರ ಸದಸ್ಯ ಅಮರ್ ಲಾಮಾ ನೇತೃತ್ವದಲ್ಲಿ ಕಲ್ಕತ್ತ ತಲುಪಿರುವ ಇನ್ನೊಂದು ಜಿಜೆಎಮ್ ನಿಯೋಗ ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರೊಂದಿಗೆ ಮಾತುಕತೆ ನಡೆಸಲಿದೆ. ಈ ಮಾತುಕತೆಯು ಭಟ್ಟಾಚಾರ್ಯ ಅವರು ಮಾಡಿದ ಲಿಖಿತ ಮನವಿಯ ಫಲಶ್ರುತಿಯಾಗಿದೆ. ಈ ಮೊದಲು ರಾಜ್ಯ ಸರಕಾರದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲವೆಂದು ಜಿಜೆಎಮ್ ಪ್ರಕಟಿಸಿತ್ತು.
ಮತ್ತಷ್ಟು
ಕಲ್ಪಾಕಂ ಸ್ಥಾವರದಲ್ಲಿ ಸೇಫ್ಟಿ ವೆಸೆಲ್ ಅಳವಡಿಕೆ
ಜಯಾಬಚ್ಚನ್‌ಗೆ ಚು.ಆಯೋಗ ನೋಟೀಸ್
ಜುಲೈ-ಆಗಸ್ಟ್‌ನಲ್ಲಿ ಸಂಸತ್ ಅಧಿವೇಶನ
ಪ್ರಧಾನಿ ಆತ್ಮವಿಶ್ವಾಸ ಕಳಕೊಂಡಿದ್ದಾರೆ: ನಾಯ್ಡು
ಪ್ರವಾಹ ಪೀಡಿತ ಪ್ರದೇಶಗಳ ಚೇತರಿಕೆ
ಹುರಿಯತ್ ನಾಯಕ ಗಿಲಾನಿಗೆ ಗೃಹಬಂಧನ