ಭಾರತ-ಅಮೆರಿಕ ಅಣು ಒಪ್ಪಂದದ ಕುರಿತಾಗಿ ಯುಪಿಎ ಮತ್ತು ಎಡಪಕ್ಷಗಳು ಬುಧವಾರ ಮಾತುಕತೆ ನಡೆಸಲಿದ್ದು, ಆದರೆ ಈ ಮಾತುಕತೆಯು ನಿರ್ದಿಷ್ಟ ನಿರ್ಣಯವು ಹೊರತರುವ ಸಾಧ್ಯತೆ ಕಷ್ಟಕರವಾಗಿದೆ.
ಪರಮಾಣು ಒಪ್ಪಂದಕ್ಕೆ ಬೆಂಬಲ ನೀಡುವುದಿಲ್ಲ ಎಂಬ ದೃಢ ನಿಲುವನ್ನು ಎಡಪಕ್ಷಗಳು ಹೊಂದಿರುವುದರೊಂದಿಗೆ, ಎಡಪಕ್ಷಗಳನ್ನು ಧಿಕ್ಕರಿಸಿಯೂ ಯುಪಿಎ ಸರಕಾರವು ಒಪ್ಪಂದವನ್ನು ಮುಂದುವರಿಸಿದಲ್ಲಿ ತಮ್ಮ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಈಗಾಗಲೇ ಎಡಪಕ್ಷಗಳು ಸ್ಪಷ್ಟಪಡಿಸಿವೆ.
ಅಣು ಒಪ್ಪಂದದ ಕುರಿತಾಗಿ ಪ್ರಧಾನಮಂತ್ರಿಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿರುವ ಕಾಂಗ್ರೆಸ್ ಪಕ್ಷದೊಂದಿಗೆ ಯುಪಿಎ ಸರಕಾರವು ಇಂದು ಮಾತುಕತೆಯನ್ನು ನಡೆಸಲಿದೆ.
ಏನೇ ಆದರೂ, ಭಿನ್ನ ನಿಲುವನ್ನು ಹೊಂದಿರುವ ಯುಪಿಎ ಸರಕಾರದ ಮೈತ್ರಿ ಪಕ್ಷಗಳೊಂದಿಗೆ ಒಮ್ಮತ ಮೂಡಿಸಲು ಯುಪಿಎ ಸರಕಾರವು ಪ್ರಯತ್ನಿಸುತ್ತಿದೆ.
|