ಜನದಟ್ಟಣೆಯನ್ನು ತಡೆಯುವ ನಿಟ್ಟಿನಲ್ಲಿ ಅಮರನಾಥ ಯಾತ್ರಿಕರನ್ನು ಬುಧವಾರವೂ ತಡೆಹಿಡಿಯಲಾಗಿದೆ.
ಯಾತ್ರಾರ್ಥಿಗಳು ಉಳಿದುಕೊಂಡಿರುವ ಜಮ್ಮು-ಕಾಶ್ಮೀರದ ಗಂದೇರ್‌ಬಾಲ್ ಜಿಲ್ಲೆಯ ಪಹಲ್‌ಗಮ್ ಮತ್ತು ಬಾಟ‌್‌ಲಾ ಶಿಬಿರಗಳಲ್ಲಿ ಉಂಟಾದ ಅತಿಯಾದ ನೂಕುನುಗ್ಗಲಿನಿಂದಾಗಿ, ಭಗವತಿ ನಗರದ ಶಿಬಿರದಿಂದ ಯಾತ್ರಾರ್ಥಿಗಳು ಯಾತ್ರೆಯನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗಿಲ್ಲ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 17ರಿಂದ ಮೊದಲ್ಗೊಂಡ ಯಾತ್ರೆಯಲ್ಲಿ, ಈಗಾಗಲೇ ನಿನ್ನೆ ಸಂಜೆಯವರೆಗೆ 2.83 ಲಕ್ಷ ಭಕ್ತಾದಿಗಳು ಇದೀಗಾಗಲೇ ಪವಿತ್ರ ಹಿಮ ಲಿಂಗದ ದರ್ಶನಕ್ಕೆ ತೆರಳಿದ್ದು, ಪಹಲ್‌ಗಮ್ ಮತ್ತು ಬಾಟ‌್‌ಲಾ ದಾರಿಯಾಗಿ ಗುಹಾ ದೇವಾಲಯಕ್ಕೆ ಸಾಗುತ್ತಿರುವ ಯಾತ್ರಾರ್ಥಿಗಳ ದಟ್ಟಣೆ ಗಣನೀಯವಾಗಿ ಏರಿದೆ
ಈ ಮೊದಲು, ಪ್ರತಿಕೂಲ ಹವಾಮಾನ ಹಾಗೂ ಭಾರೀ ಮಳೆಯ ಕಾರಣ ಜೂನ್ 20ರಂದು ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
|