ಪತ್ನಿಯ ನಿಧನದಿಂದ ಅನುಕಂಪದ ಆಧಾರದಲ್ಲಿ ಉದ್ಯೋಗ ಗಳಿಸಿದ ವ್ಯಕ್ತಿಯೊಬ್ಬ ಮೊದಲ ದಿನದಂದೆ ಕಚೇರಿಯಲ್ಲಿ ಕುಸಿದು ಬಿದ್ದು ಅಸುನೀಗಿದ ದುರಂತವೊಂದು ವಿಜ್‌ಹಿಂಜಾಮ್ ನಗರದ ಕಚೇರಿಯೊಂದರಲ್ಲಿ ಘಟಿಸಿದೆ.
ರಾಜು (40) ಎಂಬ ದುರ್ದೈವಿ ಮೃತಪಟ್ಟಿದ್ದು, ಈತನಿಗೆ ಅನುಕಂಪದ ಅಧಾರದಲ್ಲಿ ಬಂದರು ಇಂಜಿನಿಯರ್ ಕಛೇರಿಯಲ್ಲಿ ಪಿಯೊನ್ ಕೆಲಸ ದೊರಕಿತ್ತು. ಈತನ ಪತ್ನಿ ವಿಮಲಾ ಇದೇ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದರು.
ಕಚೇರಿಯ ಪಕ್ಕದ ಹೋಟೆಲ್ ಒಂದಕ್ಕೆ ಊಟ ಮಾಡಲು ಹೊರಟಿದ್ದ ಇವರು ತೀವ್ರ ಅಸ್ವಸ್ಥಗೊಂಡು, ದಾರಿ ಮಧ್ಯೆ ಕುಸಿದು ಬಿದ್ದರು. ಸಹೋದ್ಯೊಗಿಗಳು ತಕ್ಷಣ ಇವರನ್ನು ಪಕ್ಕದ ಅಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಈ ನತದೃಷ್ಟ ದಂಪತಿಗಳಿಗೆ ಮಕ್ಕಳಿರಲಿಲ್ಲ.
|