ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಕ್ಕಟ್ಟು ಶಮನಕ್ಕೆ ಸಮನ್ವಯ ಸಮಿತಿ ಸಭೆ ವಿಫಲ  Search similar articles
PTI
ಭಾರತ-ಅಮೆರಿಕ ಅಣು ಒಪ್ಪಂದ ಕುರಿತ ಬಿಕ್ಕಟ್ಟು ಶಮನಕ್ಕಾಗಿ ಹಮ್ಮಿಕೊಂಡಿದ್ದ ಬಹುನಿರೀಕ್ಷಿತ, ಯುಪಿಎ-ಎಡಪಕ್ಷಗಳ ಸಮನ್ವಯ ಸಮಿತಿ ಸಭೆಯು ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದ್ದು, ಮುಂದಿನ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿವೆ. ಮುಂದಿನ ಸಭೆಯ ದಿನಾಂಕವನ್ನು ಇನ್ನಷ್ಟೆ ನಿಗದಿ ಪಡಿಸಬೇಕಾಗಿದೆ.

ಬುಧವಾರ ಸಾಯಂಕಾಲದ ಸಭೆಯಲ್ಲಿ ಅಣುಒಪ್ಪಂದದ ವಿವಿಧ ಕೋನಗಳ ಕುರಿತು ಚರ್ಚಿಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಸುಮಾರು 90 ನಿಮಿಷಗಳ ಸಭೆಯಲ್ಲಿ ಸಮಿತಿಯು ಅಣು ಒಪ್ಪಂದದ ಸರ್ವ ವಿಚಾರಗಳ ಕುರಿತು ಚರ್ಚೆ ನಡೆಸಿದ್ದು, ಅಂತಿಮ ನಿರ್ಣಯವನ್ನು ಮುಂದಿನ ಸಭೆಯಲ್ಲಿ ಕೈಗೊಳ್ಳುವುದಾಗಿ ನುಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಣಬ್ ಮುಖರ್ಜಿ, ಅಂತಿಮ ನಿರ್ಧಾರ ಕೈಗೊಳ್ಳಲು ಸಮಿತಿಯು ಸದ್ಯವೇ ಸಭೆಸೇರಲಿದೆ ಎಂದಷ್ಟೆ ತಿಳಿಸಿದ್ದು ಹೆಚ್ಚಿನ ಪ್ರಶ್ನೆಗಳಿಗೆ ಆಸ್ಪದ ನೀಡಲಿಲ್ಲ. ಸಭೆಯಲ್ಲಿ ಪಾಲ್ಗೊಂಡಿದ್ದ ಸಿಪಿಐ(ಎಂ) ನಾಯಕ ಸಿತಾರಾಮ ಯಚೂರಿ ಅವರೂ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಬಯಸಲಿಲ್ಲ.

ಸಮನ್ವಯ ಸಮಿತಿಯ 12 ಸದಸ್ಯರಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಹೊರತು ಪಡಿಸಿ ಮಿಕ್ಕೆಲ್ಲ ಸದಸ್ಯರು ಪಾಲ್ಗೊಂಡಿದ್ದರು. ಪವಾರ್ ವಿದೇಶ ಪ್ರವಾಸದಲ್ಲಿದ್ದಾರೆ.

ಕಳೆದ ವರ್ಷ ಸಮಿತಿಯನ್ನು ರೂಪಿಸಿರುವ ವೇಳೆಗೆ, ಸಮಿತಿಯ ನಿರ್ಣಯದ ಆಧಾರದಂತೆ ಸರಕಾರವು ಈ ಒಪ್ಪಂದದ ಕಾರ್ಯಾಚರಣೆ ಮಾಡುವುದಾಗಿ ಒಪ್ಪಂದಕ್ಕೆ ಬರಲಾಗಿತ್ತು.
ಮತ್ತಷ್ಟು
ಸಿಕ್ಕಿದರೂ ಧಕ್ಕದ ಅನುಕಂಪದ ಉದ್ಯೋಗ
ಅಮರನಾಥ ಯಾತ್ರೆ ಸ್ಥಗಿತ
ಐಎಇಎ ಒಪ್ಪಂದದಲ್ಲಿ ಮುಂದುವರಿದರೆ ಅಪಾಯ: ಬರ್ದಾನ್
ಸಹರಾ: ಬೇಲಿ ನಿರ್ಮಾಣಕ್ಕೆ ಸು.ಕೋ ಅನುಮತಿ
ಅಣು ಒಪ್ಪಂದ: ಪಟ್ಟು ಸಡಿಲಿಸದ ಎಡಪಕ್ಷಗಳು
ಜಿಜೆಎಮ್ - ಸರಕಾರದ ನಡುವೆ ಮಾತುಕತೆ