ಗೂರ್ಖಾಲ್ಯಾಂಡ್ ಜನಮುಕ್ತಿ ಮೋರ್ಚಾ ಸಮಿತಿಯ ಬಂದ್ ವಿರಾಮವನ್ನು ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಿಯರಂಜನ್ ದಾಸ್‌ಮುನ್ಶಿ ಸ್ವಾಗತಿಸಿದ್ದು, ಯಾವುದೇ ಕಾರಣಕ್ಕೂ ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯ ಸ್ಥಾಪನೆ ಸಾಧ್ಯವೇ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ಡಾರ್ಜಿಲಿಂಗ್ ಕುರಿತಾಗಿ ರಾಜ್ಯ ಸರಕಾರದ ನಿರ್ಲ್ಯಕ್ಷವೇ ಈ ಸಮಸ್ಯೆಗೆ ಕಾರಣ ಎಂದು ಆರೋಪಿಸಿದ ಅವರು, ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸುವುದಾಗಿ ತಿಳಿಸಿದ್ದಾರೆ.
ಆದರೆ, ಯಾವುದೇ ಕಾರಣಕ್ಕೂ ಪಶ್ಚಿಮ ಬಂಗಾಳವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ದಾಸ್‌ಮುನ್ಶಿ ಸ್ಪಷ್ಟಪಡಿಸಿದ್ದು, ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯವನ್ನು ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಡಾರ್ಜಿಲಿಂಗ್ ವಿವಾದದ ಕುರಿತಾಗಿ ತ್ರಿಪಕ್ಷೀಯ ಮಾತುಕತೆಯ ಅಗತ್ಯವಿಲ್ಲ ಎಂದು ದಾಸ್‌ಮುನ್ಶಿ ತಿಳಿಸಿದ್ದು, ಗೂರ್ಖಾ ಜನಮುಕ್ತಿ ಮೋರ್ಚಾಸಮಿತಿಯು ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಿಳಿಸಿದ್ದಾರೆ.
|