ಮೂರೂ ಸೇನಾದಳ ಮುಖ್ಯಸ್ಥರು ಮತ್ತು ಕಾರ್ಯದರ್ಶಿಗಳ ನಡುವೆ ನಡೆಯುವ ಸಭೆಯಲ್ಲಿ ಸೇನಾ ಸಿಬ್ಬಂದಿಗಳ ವೇತನವನ್ನು ಶೇ.20ರಷ್ಟು ಹೆಚ್ಚಿಸುವ ಪ್ರಸ್ತಾಪವಿರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಸಭೆಯಲ್ಲಿ ರಕ್ಷಣಾ ಸಚಿವ ಎ.ಕೆ.ಆಂಟನಿ ಭಾಗವಹಿಸಲಿದ್ದಾರೆನ್ನಲಾಗಿದೆ. ಆರನೆ ವೇತನ ಆಯೋಗದ ಶಿಫಾರಸ್ಸುಗಳು ಸೇನಾ ಸಿಬ್ಬಂದಿಗಳಲ್ಲಿ ಅತೃಪ್ತಿಯನ್ನು ಹುಟ್ಟುಹಾಕಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗುತ್ತಿದೆ.
ವೇತನದ ಹೆಚ್ಚಳದ ಪ್ರಸ್ತಾಪದ ಪ್ರಕಾರ, ಅಧಿಕಾರಿ ರ‌್ಯಾಂಕಿನ ಕೆಳಗಿನ ಎಲ್ಲಾ ಸಿಬ್ಬಂದಿಗಳಿಗೆ ಶೇ.40ರಷ್ಟು ಹೆಚ್ಚಳ ಮಾಡಲು ವಿನಂತಿಸಲಾಗಿದೆ. ಮಧ್ಯಮ ಮಟ್ಟದ ಅಧಿಕಾರಿಗಳಿಗೆ ಶೇ.30ರಷ್ಟು ಮತ್ತು ಬ್ರಿಗೇಡಿಯರ್ ಮತ್ತು ಅದಕ್ಕಿಂತ ಮೇಲಿನ ದರ್ಜೆಯವರಿಗೆ ಶೇ.20ರಷ್ಟು ಏರಿಕೆಯ ಪ್ರಸ್ತಾಪವನ್ನು ಇರಿಸಲಾಗಿದೆ.
|