ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಲ್ವಾರ್ ಜಾಮೀನು ತೀರ್ಪು ಕಾಯ್ದಿರಿಸಿದ ನ್ಯಾಯಾಲಯ  Search similar articles
PTI
ಅರುಷಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ತಲ್ವಾರ್ ಅವರ ಜಾಮೀನು ಅರ್ಜಿಯ ತೀರ್ಪನ್ನು ಗಜಿಯಾಬಾದ್ ನ್ಯಾಯಾಲಯವೊಂದು ಗುರುವಾರ ಕಾಯ್ದಿರಿಸಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಇದುವರೆಗೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಅದಾಗ್ಯೂ, ತಲ್ವಾರ್ ಬಂಧನವನ್ನು ಮುಂದುವರಿಸುವಂತೆ ವಾದಿಸುವುದಾಗಿ ಸಿಬಿಐ ಹೇಳಿದೆ. ಪ್ರಸ್ತುತ ದಾಸ್ನಾ ಜೈಲಿನಲ್ಲಿರುವ ತಲ್ವಾರ್, ದೂಷಾರೋಪಣೆ ಪಟ್ಟಿ ಸಲ್ಲಿಸುವ ತನಕ ಪ್ರಕರಣದ ಆರೋಪಿಯಾಗಿಯೇ ಮುಂದುವರಿಯುತ್ತಾರೆ.

ಅರುಷಿಯ ತಾಯಿ, ದಂತವೈದ್ಯೆ ನೂಪುರ್ ತಲ್ವಾರ್ ಅವರನ್ನು ಬುಧವಾರ ಎರಡನೆ ಬಾರಿಗೆ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಯಾವುದೇ ಪ್ರಮುಖ ಅಂಶ ಹೊರಬೀಳಲಿಲ್ಲ.

ಏತನ್ಮಧ್ಯೆ, ರಾಜೇಶ್ ತಲ್ವಾರ್ ಅವರ ಸಹಾಯಕ ಕಾಂಪೊಡರ್ ಕೃಷ್ಣ ಸಿಬಿಐ ವಶದಲ್ಲಿದ್ದಾನೆ. ಕೃಷ್ಣನ ಮನೆಯಿಂದ ವಶಪಡಿಸಿಕೊಳ್ಳಲಾಗಿರು ಕುಕ್ರಿಯೊಂದನ್ನು ಫಾರೆನ್ಸಿಕ್ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದನ್ನು ಅರುಷಿ ಹಾಗೂ ಹೇಮರಾಜ್‌ ಜೋಡಿ ಕೊಲೆಗೆ ಬಳಸಲಾಗಿದೆಯೇ ಎಂದು ಪರೀಕ್ಷಿಸಲಾಗುತ್ತಿದೆ.

ಹದಿನಾಲ್ಕರ ಹರೆಯದ ಅರುಷಿ ತಲ್ವಾರ್ ಮೇ 16ರಂದು ತನ್ನ ನಿವಾಸದಲ್ಲಿ ಕೊಲೆಗೀಡಾಗಿದ್ದಳು. ಮರುದಿನದಂದು ಅವರ ಮನೆಯಾಳು ಹೇಮರಾಜ್‌ನ ಶವವೂ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಅರುಷಿ ತಲ್ವಾರ್, ವೈದ್ಯ ದಂಪತಿಗಳಾದ ರಾಜೇಶ್ ಮತ್ತು ನೂಪುರ್ ಅವರ ಪುತ್ರಿ.
ಮತ್ತಷ್ಟು
ಫೀಲ್ಡ್ ಮಾರ್ಷಲ್ ಸಾಮ್ ಮಣಿಕ್‌ಶಾ ಗಂಭೀರ
ಸೇನಾ ಸಿಬ್ಬಂದಿಗಳಿಗೆ ಶೇ.40ರಷ್ಟು ವೇತನ ಹೆಚ್ಚಳ ಶಿಫಾರಸ್ಸು
ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯ ಅಸಾಧ್ಯ: ದಾಸ್‌ಮುನ್ಶಿ
ಬಿಕ್ಕಟ್ಟು ಶಮನಕ್ಕೆ ಸಮನ್ವಯ ಸಮಿತಿ ಸಭೆ ವಿಫಲ
ಸಿಕ್ಕಿದರೂ ಧಕ್ಕದ ಅನುಕಂಪದ ಉದ್ಯೋಗ
ಅಮರನಾಥ ಯಾತ್ರೆ ಸ್ಥಗಿತ