ಮಣಿಪುರದಲ್ಲಿ ನಡೆದ ಘಟನೆಗಳಲ್ಲಿ ಇಬ್ಬರು ಶಂಕಿತ ಭಯೊತ್ಪಾದಕರು ಸೇರಿದಂತೆ ಮೂವರು ಪೊಲೀಸ್ ಗುಂಡಿಗೆ ಅಹುತಿಯಾಗಿದ್ದಾರೆ.
ಪೂರ್ವ ಮತ್ತು ಪಶ್ಚಿಮ ಇಂಫಾಲದಲ್ಲಿ ಶಂಕಿತ ಭಯೊತ್ಪಾದಕರಿಬ್ಬರು ಪೊಲೀಸರು ಗುಂಡಿಗೆ ಆಹುತಿಯಾಗಿದ್ದು, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತೊಂದು ಘಟನೆಯಲ್ಲಿ ಪೊಲೀಸರು ಥೋಬಲ್ ಜಿಲ್ಲೆಯಲ್ಲಿ ಶವವೊಂದನ್ನು ಪತ್ತೆಹಚ್ಚಿದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
|