ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಬ್‌ಜಿತ್‌ಗೆ ಜೀವದಾನ: ಸ್ಪಷ್ಟನೆ ಕೇಳಿದ ಭಾರತ  Search similar articles
PTI
ಎಲ್ಲಾ ಮರಣದಂಡನೆ ಪ್ರಕರಣಗಳನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿರುವ ಪಾಕಿಸ್ತಾನದ ಇತ್ತೀಚಿನ ಪ್ರಸ್ತಾಪವು, ಭಾರತೀಯ ಪ್ರಜೆ ಸರಬ್‌ಜಿತ್‌ಗೆ ಅನ್ವಯವಾಗುತ್ತದೆಯೇ ಎಂದು ಭಾರತವು ಪಾಕಿಸ್ತಾನವನ್ನು ಕೇಳಿದ್ದು, ಉತ್ತರಕ್ಕಾಗಿ ಎದುರು ನೋಡುತ್ತಿದೆ.

ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಎಲ್ಲಾ ಮರಣದಂಡನೆ ಪ್ರಕರಣಗಳನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವುದಾಗಿ, ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ಜನ್ಮದಿನಾಚರಣೆಯಂದು ಘೋಷಿಸಿದ್ದರು.

ಈ ಮಾಪಿಯು ಹೀನಕೃತ್ಯಗಳನ್ನು ಎಸಗಿರುವ ಅಪರಾಧಿಗಳಿಗೆ ಅನ್ವಯವಾಗುವುದಿಲ್ಲ ಎಂಬುದಾಗಿ ಹೇಳಿರುವ ಕಾರಣ ಉದ್ಭವವಾಗಿರುವ ಗೊಂದಲಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತವು ಸ್ಪಷ್ಟನೆ ಕೇಳಿದೆ.

ಜೂನ್ 21ರಂದು ಈ ಪ್ರಸ್ತಾಪವನ್ನು ಘೋಷಿಸಿದ್ದಾಗ, ಸರಬ್‌ಜಿತ್ ಸಿಂಗ್‌ಗೆ ಜೀವದಾನ ಲಭಿಸುವುದಾಗಿ ಹೇಳಲಾಗಿತ್ತು. ಆದರೆ ಮರುದಿನದಂದು ಭಯೋತ್ಪಾದನಾ ಕೃತ್ಯಗಳನ್ನು ಎಸಗಿರುವವರಿಗೆ ಈ ಕ್ಷಮಾದಾನ ಅನ್ವಯವಾಗುವುದಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಗೊಂದಲಗಳು ಮೂಡಿವೆ.

ಲಾಹೋರ್‌ನಲ್ಲಿ 1990ರಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಬ್‌ಜಿತ್‌ಗೆ ಮರಣದಂಡನೆ ವಿಧಿಸಲಾಗಿದೆ. ಆದರೆ ಈ ಆಪಾದನೆಯನ್ನು ಒಪ್ಪಿಕೊಳ್ಳದ ಸರಬ್‌ಜಿತ್ ವ್ಯಕ್ತಿಯ ತಪ್ಪುಗುರುತಿಸುವಿಕೆಯಿಂದಾಗಿ ತನ್ನ ಮೇಲೆ ಈ ಆಪಾದನೆ ಎಸಗಲಾಗಿದೆ ಎಂದು ವಾದಿಸುತ್ತಲೇ ಬಂದಿದ್ದಾನೆ.
ಮತ್ತಷ್ಟು
ಫೀಲ್ಡ್ ಮಾರ್ಶಲ್ ಮಾಣಿಕ್ ಶಾ ನಿಧನ
ಲೋಕಸಭಾ ಚುನಾವಣಾಗೆಗೆ ಬಿಜೆಪಿ ಪಟ್ಟಿ ಸಿದ್ಧ
ಭ್ರಷ್ಟಾಚಾರ: ಭಾರತಕ್ಕೆ 74ನೆ ಸ್ಥಾನ
ಮಣಿಪುರ: ಉಗ್ರರಿಬ್ಬರು ಪೊಲೀಸ್ ಗುಂಡಿಗೆ ಅಹುತಿ
ತಲ್ವಾರ್ ಜಾಮೀನು ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ಫೀಲ್ಡ್ ಮಾರ್ಷಲ್ ಸಾಮ್ ಮಣಿಕ್‌ಶಾ ಗಂಭೀರ