ಬಿಹಾರ, ಕೇರಳ, ಅಸ್ಸಾಂ, ಮೇಘಾಲಯ ಮತ್ತು ಸಿಕ್ಕಿಂಗಳಿಗೆ ಹೊಸ ರಾಜ್ಯಪಾಲರನ್ನು ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ನೇಮಿಸಿದ್ದಾರೆ.
ಕೇರಳಕ್ಕೆ ಆರ್.ಎಸ್.ಗವಾಯ್, ಬಿಹಾರಕ್ಕೆ ಆರ್.ಎಲ್.ಭಾಟಿಯಾ, ಅಸ್ಸಾಂಗೆ ಶಿವಚರಣ್ ಮಾಥುರ್, ಸಿಕ್ಕಿಂಗೆ ವಾಲ್ಮಿಕಿ ಪ್ರಸಾದ್ ಸಿಂಗ್ ಮತ್ತು ಮೇಘಾಲಯಕ್ಕೆ ರಂಜಿತ್ ಶೇಖರ್ ಮುಶಾಹರಿ ಅವರನ್ನು ರಾಜ್ಯಪಾಲರಾಗಿ ನೇಮಿಸಲಾಗಿದೆ.
ಗವಾಯ್ ಮತ್ತು ಭಾಟಿಯಾ ಅವರುಗಳ ಸ್ಥಾನಗಳನ್ನು ಪರಸ್ಪರ ಅದಲುಬದಲು ಮಾಡಲಾಗಿದ್ದರೆ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಶಿವ ಚರಣ್ ಮಾಥುರ್ ಅವರನ್ನು ಅಸ್ಸಾಮಿನ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಅಜಯ್ ಸಿಂಗ್ ಅವರ ಸ್ಥಾನಕ್ಕೆ ನೇಮಿಸಲಾಗಿದೆ.
ಸಿಕ್ಕಿಂನ ಸುದರ್ಶನ್ ಅಗರ್ವಾಲ್ ಅವರ ಸ್ಥಾನಕ್ಕೆ ವಾಲ್ಮಿಕಿ ಪ್ರಸಾದ್ ನೇಮಕಗೊಳ್ಳಲಿದ್ದರೆ, ರಂಜಿಚ್ ಶೇಖರ್ ಮುಶಹರಿ ಅವರು ಮೇಘಾಲಯದ ರಾಜ್ಯಪಾಲ ಎಸ್.ಎಸ್.ಸಿಧು ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
|